ADVERTISEMENT

ನಿಲೇಕಣಿ ಭೇಟಿ ಮಾಡಿದ ಜಿಎಸ್‌ಟಿಎನ್‌ ತಂಡ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 19:30 IST
Last Updated 18 ನವೆಂಬರ್ 2017, 19:30 IST
ನಿಲೇಕಣಿ ಭೇಟಿ ಮಾಡಿದ ಜಿಎಸ್‌ಟಿಎನ್‌ ತಂಡ
ನಿಲೇಕಣಿ ಭೇಟಿ ಮಾಡಿದ ಜಿಎಸ್‌ಟಿಎನ್‌ ತಂಡ   

ಬೆಂಗಳೂರು: ಜಿಎಸ್‌ಟಿಎನ್‌ ತಾಂತ್ರಿಕ ಸಮಸ್ಯೆ ನಿವಾರಣೆಗೆ ರಚಿಸಿರುವ ಸಚಿವರ ತಂಡವು ಶನಿವಾರ ಇನ್ಫೊಸಿಸ್‌ ಅಧ್ಯಕ್ಷ ನಂದನ್‌ ನಿಲೇಕಣಿ ಅವರನ್ನು ಭೇಟಿ ಮಾಡಿ ಜಿಎಸ್‌ಟಿಎನ್‌ನಲ್ಲಿ ಇರುವ ತಾಂತ್ರಿಕ ಸಮಸ್ಯೆಗಳ ಕುರಿತು ಚರ್ಚೆ ನಡೆಸಿತು.

‘ರಿಟರ್ನ್‌ ಸಲ್ಲಿಕೆಗೆ ಅನುಕೂಲ ಆಗುವಂತೆ ಜಿಎಸ್‌ಟಿಎನ್‌ ಇನ್ನಷ್ಟು ಸರಳವಾಗಿದೆ ಎಂದು ನಿಲೇಕಣಿ ಭರವಸೆ ನೀಡಿದ್ದಾರೆ’ ಎಂದು ಸಚಿವರ ತಂಡದ ಅಧ್ಯಕ್ಷ, ಬಿಹಾರ ಉಪ ಮುಖ್ಯಮಂತ್ರಿ ಸುಶೀಲ್‌ ಕುಮಾರ್‌ ಮೋದಿ ‌ತಿಳಿಸಿದರು.

ಜಿಎಸ್‌ಟಿಎನ್‌ನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆಗಳು ಯಾವಾಗ ಬಗೆಹರಿಯಲಿವೆ ಎನ್ನುವುದಕ್ಕೆ ಸಚಿವರ ತಂಡ ಯಾವುದೇ ಗಡುವು ನೀಡಿಲ್ಲ. ಬದಲಿಗೆ, ಜಿಎಸ್‌ಟಿಎನ್‌ ಸರಳಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದಷ್ಟೇ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.