ADVERTISEMENT

ಪೇಟೆಗೆ ಬಿಎಂಡಬ್ಲ್ಯು ಗ್ರಾನ್ ಟೂರಿಸ್ಮೊ

ದಯಾನಂದ ಎಚ್‌.ಎಚ್‌.
Published 23 ಅಕ್ಟೋಬರ್ 2016, 20:21 IST
Last Updated 23 ಅಕ್ಟೋಬರ್ 2016, 20:21 IST
ಪೇಟೆಗೆ ಬಿಎಂಡಬ್ಲ್ಯು ಗ್ರಾನ್ ಟೂರಿಸ್ಮೊ
ಪೇಟೆಗೆ ಬಿಎಂಡಬ್ಲ್ಯು ಗ್ರಾನ್ ಟೂರಿಸ್ಮೊ   

ಪುಣೆ: ಬಿಎಂಡಬ್ಲ್ಯು ತನ್ನ 3ನೇ ಆವೃತ್ತಿಯ ‘ಗ್ರಾನ್ ಟೂರಿಸ್ಮೊ’ ಐಷಾರಾಮಿ ಕಾರನ್ನು ದೇಶಿ ಮಾರುಕಟ್ಟೆಗೆ ಬುಧವಾರ ಇಲ್ಲಿ ಬಿಡುಗಡೆ ಮಾಡಿತು. ‘ಪ್ರವಾಸಕ್ಕೆ ಅನುಕೂಲವಾಗುವಂತೆ ಗ್ರಾನ್ ಟೂರಿಸ್ಮೊದ ಒಳಭಾಗ ಹಾಗೂ ಡಿಕ್ಕಿಯ ಸ್ಥಳಾವಕಾಶ ಹೆಚ್ಚಿಸಲಾಗಿದೆ.

ಭಾರತದ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರಿನ ವಿನ್ಯಾಸ ಮಾಡಲಾಗಿದೆ’ ಎಂದು ಬಿಎಂಡಬ್ಲ್ಯು ಭಾರತ ಸಮೂಹದ ಅಧ್ಯಕ್ಷ ಫ್ರಾಂಕ್ ಎಮಾನ್ಯುಯಲ್ ಸ್ಕಾಲ್ಡರ್ ತಿಳಿಸಿದರು. 

‘ಟ್ವಿನ್ ಪವರ್ ಟಬ್ರೊ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಕಾರುಗಳೆರಡರಲ್ಲೂ ಇಕೊ ಪ್ರೊ ವ್ಯವಸ್ಥೆಯಿದೆ. ಇದರಿಂದಾಗಿ ಶೇಕಡ 20ರಷ್ಟು ಇಂಧನ ಕ್ಷಮತೆ ಸಾಧಿಸಬಹುದು. ಆಟೊ ಸ್ಟಾರ್ಟ್/ ಆಫ್ ವ್ಯವಸ್ಥೆಯಿಂದ ಶೇಕಡ 6ರಷ್ಟು ಇಂಧನ ಉಳಿತಾಯವಾಗಲಿದೆ' ಎಂದು ಹೇಳಿದರು.

‘ಗ್ರಾನ್ ಟೂರಿಸ್ಮೊದಲ್ಲಿ ಐಷಾರಾಮದ ಜತೆಗೆ ಸುರಕ್ಷತೆಗೆ ಒತ್ತು ನೀಡಲಾಗಿದೆ. 22.3 ಸೆಂ.ಮೀ. ಡಿಸ್ಪ್ಲೇ ಹೊಂದಿರುವ ಬಿಎಂಡಬ್ಲ್ಯು ಕನೆಕ್ಟ್ ಡ್ರೈವ್ ವ್ಯವಸ್ಥೆ ಈ ಕಾರಿನಲ್ಲಿದೆ. ಐಷಾರಾಮಿ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಈ ಕಾರನ್ನು ರೂಪಿಸಲಾಗಿದೆ’ ಎಂದರು.

ಶೀಘ್ರದಲ್ಲೇ ಬೈಕ್: ‘ಭಾರತದ ಮಾರುಕಟ್ಟೆಗೆ ಶೀಘ್ರದಲ್ಲೇ ಬಿಎಂಡಬ್ಲ್ಯು ಬೈಕ್‌ಗಳನ್ನು ಬಿಡುಗಡೆ ಮಾಡಲಾಗುವುದು’ ಎಂದು ಫ್ರಾಂಕ್ ತಿಳಿಸಿದರು. 'ಭಾರತದಲ್ಲಿ ಬಿಎಂಡಬ್ಲ್ಯು ಬೈಕ್ ಗಳಿಗೆ ಬೇಡಿಕೆ ಇದೆ. ಹೀಗಾಗಿ ಮುಂದಿನ ವರ್ಷದಲ್ಲಿ ಭಾರತೀಯ ಮಾರುಕಟ್ಟೆಗೆ ಬೈಕ್‌ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

‘ಬೈಕ್ ಮಾರುಕಟ್ಟೆ ವಿಸ್ತರಿಸಲು ಹೊಸ ಡೀಲರ್‌ಗಳ ಆಯ್ಕೆ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಭಾರತದ ರಸ್ತೆಗಳಲ್ಲಿ ಬಿಎಂಡಬ್ಲ್ಯು ಬೈಕ್‌ಗಳು ಸದ್ದು ಮಾಡಲಿವೆ’ ಎಂದರು. ಬಿಎಂಡಬ್ಲ್ಯು ಗ್ರಾನ್ ಟೂರಿಸ್ಮೊ ಆರಂಭಿಕ ಬೆಲೆ ₹ 43 ಲಕ್ಷ ಇದೆ.

(ಸಂಸ್ಥೆಯ ಆಹ್ವಾನದ ಮೇರೆಗೆ ವರದಿಗಾರ ಪುಣೆಗೆ ಭೇಟಿ ನೀಡಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.