ADVERTISEMENT

ಪ್ರಗತಿ ಪಥದಲ್ಲಿ ಜೈವಿಕ ತಂತ್ರಜ್ಞಾನ ನವೋದ್ಯಮ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:30 IST
Last Updated 21 ಫೆಬ್ರುವರಿ 2017, 19:30 IST
ಪ್ರಗತಿ ಪಥದಲ್ಲಿ ಜೈವಿಕ ತಂತ್ರಜ್ಞಾನ ನವೋದ್ಯಮ
ಪ್ರಗತಿ ಪಥದಲ್ಲಿ ಜೈವಿಕ ತಂತ್ರಜ್ಞಾನ ನವೋದ್ಯಮ   
ಮುಂದಿನ ಪೀಳಿಗೆಯ ಜೈವಿಕ ತಂತ್ರಜ್ಞಾನ ಉದ್ಯಮಿಗಳಿಗೆ ಮಾರ್ಗದರ್ಶನ ನೀಡಲು ಮತ್ತು ದೇಶದಲ್ಲಿ ಜೈವಿಕ ತಂತ್ರಜ್ಞಾನ ಉದ್ಯಮದ ಬೆಳವಣಿಗೆಗೆ ಉದ್ಯಮದ ಹಿರಿಯ ನಾಯಕರ ಮೇಲ್ವಿಚಾರಣಾ ಕೇಂದ್ರ ಆರಂಭಿಸುವುದು ಒಕ್ಕೂಟದ ಪಾಲಿಗೆ ಹೆಮ್ಮೆಯ ವಿಷಯವಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷೆ ಕಿರಣ್‌ ಮಜುಂದಾರ್‌ ಷಾ ಅವರು ಅಭಿಪ್ರಾಯಪಟ್ಟಿದ್ದಾರೆ.
 
‘ಈಗಾಗಲೇ ಹಲವು ಹಿರಿಯ ಉದ್ಯಮಿಗಳು ಸ್ವತಂತ್ರವಾಗಿ ಸ್ಟಾರ್ಟ್‌ ಅಪ್‌ಗಳ ಪ್ರಗತಿಯ ಬಗ್ಗೆ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇದೀಗ ಒಕ್ಕೂಟವೇ ಸ್ಟಾರ್ಟ್‌ಅಪ್‌ಗಳ ಮೇಲ್ವಿಚಾರಣೆಗೆ ಮುಂದಾಗಿರುವುದರಿಂದ ಉದ್ಯಮ ಇನ್ನಷ್ಟು ಬಲಗೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.
 
* 2020ರ ವೇಳೆಗೆ ಸ್ಟಾರ್ಟ್‌ಅಪ್‌ ಕಂಪೆನಿಗಳ ಸಂಖ್ಯೆ 2020ಕ್ಕೆ ಏರಿಕೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಹೂಡಿಕೆ ಪ್ರಮಾಣವನ್ನು ₹33,500 ಕೋಟಿಗಳಿಗೆ ಹೆಚ್ಚಿಸಲಾಗುವುದು.
-ಡಾ. ಪಿ.ಎಂ. ಮುರಳಿ, ಎಬಿಎಲ್ಇ ಅಧ್ಯಕ್ಷ
 
ಜೈವಿಕ ತಂತ್ರಜ್ಞಾನ ಉದ್ಯಮಗಳ ಒಕ್ಕೂಟ (ಎಬಿಎಲ್‌ಇ) ನಡೆಸಿರುವ ‘ಭಾರತದ ಜೈವಿಕ ತಂತ್ರಜ್ಞಾನ ನವೋದ್ಯಮದ ಆರ್ಥಿಕ ಸ್ಥಿತಿ’ ಅಧ್ಯಯನ ವರದಿಯಲ್ಲಿ ಈ ಮಾಹಿತಿ ನೀಡಲಾಗಿದೆ.ದೇಶದ ಜೈವಿಕ ತಂತ್ರಜ್ಞಾನ ಉದ್ಯಮ ಉತ್ತಮ ಪ್ರಗತಿ ಹಾದಿಯಲ್ಲಿದೆ.
 
2016 ಡಿಸೆಂಬರ್‌ವರೆಗೆ ಉದ್ಯಮದಲ್ಲಿ ಒಟ್ಟು 1022 ಕಂಪೆನಿಗಳಿದ್ದು, 2012 ರಿಂದ 2016ರ ಒಳಗೆ ₹18,700 ಕೋಟಿ ಬಂಡವಾಳ ಹೂಡಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.