ADVERTISEMENT

ಫೆಡರಲ್‌ ಬ್ಯಾಂಕ್‌ ಬಡ್ಡಿದರ ಯಥಾಸ್ಥಿತಿ

​ಪ್ರಜಾವಾಣಿ ವಾರ್ತೆ
Published 28 ಜುಲೈ 2016, 19:30 IST
Last Updated 28 ಜುಲೈ 2016, 19:30 IST
ಫೆಡರಲ್‌ ಬ್ಯಾಂಕ್‌ ಬಡ್ಡಿದರ  ಯಥಾಸ್ಥಿತಿ
ಫೆಡರಲ್‌ ಬ್ಯಾಂಕ್‌ ಬಡ್ಡಿದರ ಯಥಾಸ್ಥಿತಿ   

ವಾಷಿಂಗ್ಟನ್ (ಎಎಫ್‌ಪಿ): ಅಮೆರಿಕದ  ಕೇಂದ್ರೀಯ (ಫೆಡರಲ್‌) ಬ್ಯಾಂಕ್‌ ಬಡ್ಡಿದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಪ್ರಗತಿಯ ಹಾದಿಯಲ್ಲಿರುವುದು ತನ್ನ ಈ ನಿರ್ಧಾರಕ್ಕೆ ಕಾರಣ ಎಂದು ಫೆಡರಲ್‌ ಬ್ಯಾಂಕ್‌ ಸಮರ್ಥನೆ ನೀಡಿದೆ. ಇದೇ ವೇಳೆ, ಮುಂಬರುವ ದಿನಗಳಲ್ಲಿ ಬಡ್ಡಿದರ ಹೆಚ್ಚಳ ಸಾಧ್ಯತೆಯ ಸುಳಿವನ್ನೂ ನೀಡಿದೆ.

ಬಡ್ಡಿದರ ಹೆಚ್ಚಳವು ಅಭಿವೃದ್ಧಿಗೆ ತೊಡಕಾಗಬಹುದು ಎಂಬ ಆತಂಕ  ಜನಪ್ರತಿನಿಧಿಗಳ ವಲಯದಿಂದ ವ್ಯಕ್ತವಾಗಿತ್ತು. ಡಿಸೆಂಬರ್‌ ವೇಳೆಗೆ ಸದ್ಯದ ಬಡ್ಡಿದರ ಶೇ 0.25ರಿಂದ ಶೇ 0.50ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ  ಎನ್ನುವುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.

ಮೇ ತಿಂಗಳಲ್ಲಿಯ ಉದ್ಯೋಗ ಸೃಷ್ಟಿ ಪ್ರಮಾಣ ಕುಂಠಿತಗೊಂಡಿದ್ದರೂ ಜೂನ್‌ ತಿಂಗಳ ಮಧ್ಯಭಾಗದಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿದೆ.

‘ಬ್ರೆಕ್ಸಿಟ್‌’ ಜನಮತ ಗಣನೆಯು ಅಮೆರಿಕ ಆರ್ಥಿಕ ಪ್ರಗತಿಯ ಮೇಲೆ ಕಿಂಚಿತ್ತೂ ಪರಿಣಾಮ ಬೀರಿಲ್ಲ ಎನ್ನುವುದೂ  ಇದರಿಂದ ಸ್ಪಷ್ಟವಾಗಿದೆ.
ಸದ್ಯ ಆರ್ಥಿಕ ಪ್ರಗತಿಗೆ ಆತಂಕ ಎದುರಾಗುವ ಯಾವ ವಿದ್ಯಮಾನಗಳೂ ಗೋಚರಿಸುತ್ತಿಲ್ಲ ಎಂದು ಹಣಕಾಸು ಮುನ್ನೋಟ ಹೇಳಿದೆ. 

ಬಡ್ಡಿದರ ಹೆಚ್ಚಿಸದಿರುವ ಬೆಳವಣಿಗೆ ಆರ್ಥಿಕ ಪ್ರಗತಿಗೆ ಇದ್ದ ಅಡ್ಡಿ, ಆತಂಕ ನಿವಾರಿಸಿದೆ ಎಂದು ಅಮೆರಿಕದ ಪ್ರಮುಖ ಆರ್ಥಿಕ ತಜ್ಞ ಸ್ಟೀವನ್‌ ರಿಚ್ಚಿಟೊ ಅಭಿಪ್ರಾಯಪಟ್ಟಿದ್ದಾರೆ.

ಉದ್ಯೋಗ ಸೃಷ್ಟಿಯ ಪ್ರಮಾಣದಲ್ಲಿಯೂ ಹೆಚ್ಚಳವಾಗಿರುವುದರಿಂದ ಸೆಪ್ಟೆಂಬರ್‌ /ಡಿಸೆಂಬರ್‌ನಲ್ಲಿ ಬಡ್ಡಿದರ ಹೆಚ್ಚಳಕ್ಕೆ ಕಾರಣವಾಗಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.