ADVERTISEMENT

ಫೋರ್ಟಿಸ್‌: 3 ನಿರ್ದೇಶಕರ ರಾಜೀನಾಮೆ

ಪಿಟಿಐ
Published 21 ಮೇ 2018, 19:05 IST
Last Updated 21 ಮೇ 2018, 19:05 IST

ನವದೆಹಲಿ: ಫೋರ್ಟಿಸ್‌ ಹೆಲ್ತ್‌ಕೇರ್‌ನ ಆಡಳಿತ ಮಂಡಳಿ ಸಭೆಗೂ ಮೊದಲೇ ಮೂವರು ನಿರ್ದೇಶಕರು ರಾಜೀನಾಮೆ ನೀಡಿದ್ದಾರೆ.

ಹರ್ಪಾಲ್‌ ಸಿಂಗ್‌, ಸಬೀನಾ ವೈಸೋಹಾ,  ತೇಜೇಂದರ್‌ ಸಿಂಗ್‌ ಶೆರ್ಗಿಲ್‌ ಮತ್ತು  ಬ್ರಿಯಾನ್ ಟೆಂಪೆಸ್ಟ್‌ ಅವರನ್ನು ಆಡಳಿತ ಮಂಡಳಿಯಿಂದ ಕೈಬಿಡುವಂತೆ ಪಾಲುದಾರರು ಬೇಡಿಕೆ ಇಟ್ಟಿದ್ದರು.

ಅವರಲ್ಲಿ ಮೂವರು ನಿರ್ದೇಶಕರಾದ ಹರ್ಪಾಲ್‌ ಸಿಂಗ್‌,  ಸಬೀನಾ ವೈಸೋಹಾ ಮತ್ತು ತೇಜೇಂದರ್‌ ಸಿಂಗ್‌ ಶೆರ್ಗಿಲ್‌ ಅವರು ರಾಜೀನಾಮೆ ನೀಡಿದ್ದಾರೆ.

ADVERTISEMENT

ಮಂಗಳವಾರ ಸಂಸ್ಥೆಯ ವಿಶೇಷ ಮಹಾ ಸಭೆ ನಡೆಯಲಿದ್ದು, ನಾಲ್ವರು ನಿರ್ದೇಶಕರನ್ನು ಕೈಬಿಡುವ ಬಗ್ಗೆ ಸಂಸ್ಥೆಯ ಪಾಲುದಾರರು ಮತ ಚಲಾಯಿಸಲು ನಿರ್ಧರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.