ADVERTISEMENT

ಬಂಗಾರ ಗರಿಷ್ಠ ರೂ200 ಇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

ನವದೆಹಲಿ/ಮುಂಬೈ (ಪಿಟಿಐ): ದೇಶದ ಪ್ರಮುಖ ಚಿನಿವಾರ ಪೇಟೆಗಳಾದ ಮುಂಬೈ ಮತ್ತು ದೆಹಲಿಯಲ್ಲಿ ಸತತವಾಗಿ ಮೂರನೇ  ದಿನವೂ ಬಂಗಾರದ ಧಾರಣೆಯಲ್ಲಿ ಇಳಿಕೆಯಾಗಿದೆ. 10ಗ್ರಾಂ ಚಿನ್ನದ ಬೆಲೆ ಗುರುವಾರ ಮುಂಬೈನಲ್ಲಿ  ರೂ160ರಷ್ಟು, ದೆಹಲಿಯಲ್ಲಿ  ರೂ200ರಷ್ಟು ಇಳಿದಿದೆ.

ಜಾಗತಿಕ ಮಟ್ಟದಲ್ಲಿ ಬೇಡಿಕೆ ತಗ್ಗಿರುವುದರಿಂದ ಚಿನ್ನಾಭರಣ ತಯಾರಕರು ಕಡಿಮೆ ಖರೀದಿ ನಡೆಸಿ ದರು. ಹೀಗಾಗಿ ಬೆಲೆ ಇಳಿಯಿತು ಎಂದು ವರ್ತಕರು ಹೇಳಿದ್ದಾರೆ.

ದೆಹಲಿಯಲ್ಲಿ ಬೆಳ್ಳಿ ಬೆಲೆಯೂ ರೂ150ರಷ್ಟು ಇಳಿದು, ಕೆ.ಜಿಗೆ ರೂ34,050ರಂತೆ ಮಾರಾಟವಾಯಿತು. ಆದರೆ ಮುಂಬೈನಲ್ಲಿ ಬೆಳ್ಳಿ ಬೆಲೆ ರೂ75ರಷ್ಟು ಏರಿಕೆಯಾಗಿ, ರೂ34,415 ರಂತೆ ಮಾರಾಟವಾಯಿತು.

ನವದೆಹಲಿ ಧಾರಣೆ: ಸ್ಟ್ಯಾಂಡರ್ಡ್‌ ಚಿನ್ನ 10 ಗ್ರಾಂಗೆ ರೂ24,940ರಂತೆ, ಅಪರಂಜಿ ಚಿನ್ನ ರೂ25,090ರಂತೆ, ಶುದ್ಧ ಬೆಳ್ಳಿ ಕೆ.ಜಿಗೆ ರೂ34,050ರಂತೆ ಮಾರಾಟವಾಯಿತು.

ಮುಂಬೈ ಧಾರಣೆ: ಸ್ಟ್ಯಾಂಡರ್ಡ್‌ ಚಿನ್ನ 10ಗ್ರಾಂಗೆ ರೂ24,675ರಂತೆ, ಅಪರಂಜಿ ಚಿನ್ನ ರೂ24,825ರಂತೆ, ಶುದ್ಧ ಬೆಳ್ಳಿ ಕೆ.ಜಿಗೆ ರೂ34,415ರಂತೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.