ADVERTISEMENT

ಬಜಾಜ್ ಅಲಯನ್ಸ್‌ನ ಹೊಸ ಆ್ಯಪ್

​ಪ್ರಜಾವಾಣಿ ವಾರ್ತೆ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST
ಬಜಾಜ್ ಅಲಯನ್ಸ್‌ನ ಹೊಸ ಆ್ಯಪ್
ಬಜಾಜ್ ಅಲಯನ್ಸ್‌ನ ಹೊಸ ಆ್ಯಪ್   

ದೇಶದಲ್ಲಿ ವಾಹನ ವಿಮೆ ಮಾಡಿಸುವ ಬಜಾಜ್ ಅಲಯನ್ಸ್‌ ಕಂಪೆನಿ ಹೊಸ ಆ್ಯಪ್ ಬಿಡುಗಡೆ ಮಾಡಿದ್ದು ಇದರ ಮೂಲಕ ವಾಹನ ವಿಮೆಯ ಹಣವನ್ನು ಸರಳವಾಗಿ ಪಡೆದುಕೊಳ್ಳಬಹುದಾಗಿದೆ. ಸಣ್ಣ ಮೊತ್ತದ ವಿಮೆ ಹಣ ಪಡೆಯುವುದಕ್ಕೆ 7 ದಿನಗಳ ಕಾಲಾವಕಾಶ ಬೇಕಾಗುತ್ತಿತ್ತು. ಈ ಆ್ಯಪ್ ಮೂಲಕ ಕೇವಲ 20 ನಿಮಿಷದಲ್ಲೇ 20 ಸಾವಿರ ರೂಪಾಯಿಗಳವರೆಗಿನ ವಿಮೆ ಹಣವನ್ನು ಸುಲಭವಾಗಿ ಪಡೆಯಬಹುದು.

ಗ್ರಾಹಕರು ಮೊದಲು ಬಜಾಜ್ ಅಲೈಯನ್ಸ್‌ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಈ ಆ್ಯಪ್ ಬಳಸಬಹುದಾಗಿದೆ. ಉದಾಹರಣೆಗೆ ಬಜಾಜ್ ಅಲಯನ್ಸ್‌ ವಿಮೆ ಸೌಲಭ್ಯ ಪಡೆದವರ ಕಾರೊಂದು ಅಪಘಾತದಲ್ಲಿ ಸಣ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿರುತ್ತದೆ. ಇದರ ದುರಸ್ತಿಗೆ 20 ಸಾವಿರ ರೂಪಾಯಿ ವೆಚ್ಚ ತಗಲುತ್ತದೆ ಎಂದು ಮೆಕಾನಿಕ್ ಹೇಳುತ್ತಾರೆ. ನಂತರ ಗ್ರಾಹಕರು ಆ ವಿಮೆ ಕಚೇರಿಗೆ ಅಲೆದು 7 ದಿನಗಳ ಬಳಿಕ ಹಣವನ್ನು ಪಡೆಯಬೇಕಾಗುತ್ತದೆ.

ಈ ಅಲೆದಾಟವನ್ನು ತಪ್ಪಿಸಲು ಬಳಕೆದಾರರು ನೇರವಾಗಿ ಆ್ಯಪ್ ಮೂಲಕ ಪೊಲೀಸ್ ದೂರಿನ ದಾಖಲಾತಿ, ಮೆಕಾನಿಕ್ ನೀಡಿದ ಪತ್ರ, ಕಾರಿನ ಡ್ಯಾಮೆಜ್ ಚಿತ್ರವನ್ನು ಅಪ್‌ಲೋಡ್ ಮಾಡಿದ 20 ನಿಮಿಷಗಳಲ್ಲಿ ಹಣ ಗ್ರಾಹಕರ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ. ವಿಮಾನದಲ್ಲಿ ಪ್ರಯಾಣಿಸುವವರಿಗಾಗಿ ಟ್ರ್ಯಾವೆಲ್ ಇಜೀ ಎಂಬ ಹೊಸ ಆ್ಯಪ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.
ಗೂಗಲ್ ಪ್ಲೇಸ್ಟೋರ್: bajajaallianz app

ADVERTISEMENT

*
ವೈಯಕ್ತಿಕ ಮಾಹಿತಿ ಸೋರಿಕೆ

ಸ್ಮಾರ್ಟ್‌ಫೋನ್‌ ಬಳಕೆ ಮಾಡುವ ಗ್ರಾಹಕರು ಹೆಚ್ಚಾಗಿ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವುದರಿಂದ  ಗ್ರಾಹಕರ ವೈಯಕ್ತಿಕ ಮಾಹಿತಿ ಅಥವಾ ದತ್ತಾಂಶಗಳು ಮೂರನೇ ವ್ಯಕ್ತಿ ಅಥವಾ ಕಂಪೆನಿಗಳಿಗೆ ಸೋರಿಕೆಯಾಗುವ ಸಾಧ್ಯತೆಗಳಿವೆ ಎಂದು ಸ್ಪೇನ್ ದೇಶದ ಐಮೀಡಿಯಾ ನೆಟ್‌ವರ್ಕ್‌  ಕಂಪೆನಿಯ ಸಂಶೋಧನೆ ತಿಳಿಸಿದೆ. ಉದಾಹರಣೆಗೆ, ಗ್ರಾಹಕ ರೊಬ್ಬರು ಒಂದು ಮನರಂಜನೆ ಆ್ಯಪ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಾರೆ.

ಆಗ  ಅವರು ಇಮೇಲ್ ಮಾಹಿತಿ, ಮೊಬೈಲ್ ಸಂಖ್ಯೆಯನ್ನು ನೀಡಬೇಕಾ ಗುತ್ತದೆ. ಹೀಗೆ ಆ್ಯಪ್‌ಗಾಗಿ ವಿನಿಮಯ ಮಾಡಿಕೊಂಡ ಮಾಹಿತಿಯು ಗೂಗಲ್, ಫೇಸ್‌ಬುಕ್ ನಂತಹ 3ನೇ ಕಂಪೆನಿ ಗಳಿಗೆ  ಸೋರಿಕೆಯಾಗಬಹುದು ಎಂದು ಐಮೀಡಿಯಾ ಆತಂಕ ವ್ಯಕ್ತಪಡಿಸಿದೆ. ಮಾಹಿತಿ ವಿನಿಮಯ ಮಾಡುವ ಮೊದಲು ಗ್ರಾಹಕರು ಜಾಗೃತರಾಗಿರಬೇಕು ಎಂದು ಐಮೀಡಿಯಾ ಎಚ್ಚರಿಕೆ ನೀಡಿದೆ.

ಇಂಟರ್ನೆಟ್‌ನಲ್ಲಿ ಕೆಲವು ಟ್ರ್ಯಾಕ್ ಆ್ಯಪ್‌ಗಳು ಗ್ರಾಹಕರ ವೈಯಕ್ತಿಕ ಮಾಹಿತಿ ಯನ್ನು ಮೂರನೇ ಕಂಪೆನಿ ಗಳಿಗೆ ನೀಡುತ್ತವೆ. ಆ ಮೂರನೇ ಕಂಪೆನಿಯವರು ಗ್ರಾಹಕರ ಇ-ಮೇಲ್ ಅಥವಾ ಸಾಮಾಜಿಕ ಜಾಲತಾಣಗಳ ಖಾತೆಗಳ ಮೂಲಕ ಅನುಮತಿ ಇಲ್ಲದೆ ಜಾಹೀರಾತು , ಇತರೆ ಸಂದೇಶಗಳನ್ನು ರವಾನಿಸುತ್ತಾರೆ ಎಂದು ಐಮೀಡಿಯಾ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.