ADVERTISEMENT

ಬಿಎಸ್‌ಎನ್‌ಎಲ್‌ ರೋಮಿಂಗ್‌ ಶುಲ್ಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 2 ಮೇ 2015, 19:30 IST
Last Updated 2 ಮೇ 2015, 19:30 IST

ಕೋಲ್ಕತ್ತ (ಪಿಟಿಐ): ಬಿಎಸ್‌ಎನ್‌ಎಲ್‌ ಮತ್ತು ಟಾಟಾ ಡೊಕೊಮೊ ಕಂಪೆನಿಗಳೂ ಸಹ ರೋಮಿಂಗ್‌ ಶುಲ್ಕದಲ್ಲಿ ಇಳಿಕೆ ಮಾಡಿವೆ.

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ ನಿರ್ದೇಶನ ದಂತೆ ಮೇ 1ರಿಂದಲೇ ಜಾರಿಗೆ ಬರು   ವಂತೆ ಪ್ರಿಪೇಯ್ಡ್‌ ಮತ್ತು ಪೋಸ್ಟ್ ಪೇಯ್ಡ್‌ಗೆ  ರೋಮಿಂಗ್‌ ಶುಲ್ಕ ಶೇ 40ರ ವರೆಗೂ ಇಳಿಕೆ ಮಾಡಲಾಗಿದೆ ಎಂದು ಬಿಎಸ್‌ಎನ್‌ಎಲ್‌ ಪ್ರಕಟಣೆ ತಿಳಿಸಿದೆ.

ಒಳಬರುವ ಕರೆಗಳಿಗೆ ಶೇ 40ರಷ್ಟು, ಎಸ್‌ಟಿಡಿಗೆ ಶೇ 23ರಷ್ಟು ಮತ್ತು ಸ್ಥಳೀಯ ಕರೆಗಳಿಗೆ ಶೇ 20ರಷ್ಟು ರೋಮಿಂಗ್‌ ಶುಲ್ಕ  ಕಡಿತ ಮಾಡಲಾಗಿದೆ. ಸ್ಥಳೀಯ ಮತ್ತು ರಾಷ್ಟ್ರೀಯ ಎಸ್‌ಎಂಎಸ್‌ ಶುಲ್ಕವನ್ನು ಶೇ 75ರಷ್ಟು ತಗ್ಗಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಡೊಕೊಮೊ 75ಪೈಸೆ ಇಳಿಕೆ: ಟಾಟಾ ಡೊಕೊಮೊ ರೋಮಿಂಗ್‌ ಕರೆ ಮತ್ತು ಎಸ್‌ಎಂಎಸ್‌ ಶುಲ್ಕವನ್ನು ಶೇ 75 ರವರೆಗೂ ತಗ್ಗಿಸಿದೆ.

ಎಲ್ಲಾ ಹೊರಹೋಗುವ ಸ್ಥಳೀಯ ಕರೆಗಳಿಗೆ ಒಂದು ನಿಮಿಷಕ್ಕೆ 80 ಪೈಸೆ ನಿಗದಿಮಾಡಲಾಗಿದೆ.‌ ಈ ಮೊದಲು ಒಂದು ರೂಪಾಯಿ ಇತ್ತು. ರೋಮಿಂಗ್‌ ವೇಳೆ ಎಸ್‌ಟಿಡಿ ಕರೆಗಳಿಗೆ ಒಂದು ನಿಮಿಷಕ್ಕೆ ₹ 1.50ಪೈಸೆ ಇದ್ದಿದ್ದು ಈಗ ₹ 1.15ಪೈಸೆಗೆ ಇಳಿಕೆಯಾಗಿದೆ.

ಸ್ಥಳೀಯ ಎಸ್‌ಎಂಎಸ್‌ಗೆ ಒಂದು ರೂಪಾಯಿಯಿಂದ 25ಪೈಸೆ, ರಾಷ್ಟ್ರೀಯ ಎಸ್‌ಎಂಎಸ್‌ಗೆ ₹ 1.50 ಪೈಸೆಯಿಂದ 38 ಪೈಸೆಗೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.