ADVERTISEMENT

ಬ್ಯಾಂಕ್‌ಗಳ ನಷ್ಟ ₹17,993 ಕೋಟಿ

ಪಿಟಿಐ
Published 3 ಡಿಸೆಂಬರ್ 2016, 19:30 IST
Last Updated 3 ಡಿಸೆಂಬರ್ 2016, 19:30 IST
ಬ್ಯಾಂಕ್‌ಗಳ ನಷ್ಟ ₹17,993 ಕೋಟಿ
ಬ್ಯಾಂಕ್‌ಗಳ ನಷ್ಟ ₹17,993 ಕೋಟಿ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು 2015–16ನೇ ಆರ್ಥಿಕ ವರ್ಷದಲ್ಲಿ  ₹17,993 ಕೋಟಿಗಳಷ್ಟು ನಿವ್ವಳ ನಷ್ಟ ಅನುಭವಿಸಿವೆ.

“ವಸೂಲಿಯಾಗದ ಸಾಲದ ಪ್ರಮಾಣ (ಎನ್‌ಪಿಎ) ಗರಿಷ್ಠ ಮಟ್ಟದಲ್ಲಿ ಇರುವುದು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸಿರುವ ಹಣದ ಪ್ರಮಾಣ ಹೆಚ್ಚಾಗಿರುವುದು  ಬಹುತೇಕ ಬ್ಯಾಂಕ್‌ಗಳ ನಷ್ಟಕ್ಕೆ ಕಾರಣವಾಗಿದೆ’ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಸಂತೋಶ್ ಗಂಗ್ವಾರ್‌ ಅವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

‘ಇಂದ್ರ ಧನುಷ್‌ ಯೋಜನೆಯಡಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ನಾಲ್ಕು ವರ್ಷಗಳಲ್ಲಿ ಒಟ್ಟು ₹70 ಸಾವಿರ ಕೋಟಿ ಬಂಡವಾಳ ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ಇದರಲ್ಲಿ 2015–16ರಲ್ಲಿ ₹25 ಸಾವಿರ ಕೋಟಿ ಮತ್ತು 2016–17ರಲ್ಲಿ ಬಜೆಟ್‌ ಅನುದಾನದಲ್ಲಿ ₹25 ಸಾವಿರ ಕೋಟಿ ನೀಡಲಾಗಿದೆ’ ಎಂದು ತಿಳಿಸಿದ್ದಾರೆ. ಸಾಲ ವಸೂಲಿಗೆ ಕಠಿಣ ಕ್ರಮ ಕೈಗೊಂಡಿದ್ದು, ಮುಂದಿನ ತ್ರೈಮಾಸಿಕಗಳಲ್ಲಿ ಲಾಭ ಗಳಿಸುವುದಾಗಿ ಬ್ಯಾಂಕ್‌ಗಳು ವಿಶ್ವಾಸ  ವ್ಯಕ್ತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.