ADVERTISEMENT

ಬ್ಯಾಂಕ್‌ ವಾಹನ ಬಳಕೆ ನಿರ್ದೇಶಕರಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 27 ಮೇ 2015, 19:30 IST
Last Updated 27 ಮೇ 2015, 19:30 IST

ನವದೆಹಲಿ(ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ನಿರ್ದೇಶಕ ಮಂಡಳಿಗೆ ಸರ್ಕಾರದಿಂದ ನೇಮಕಗೊಳ್ಳುವ ನಿರ್ದೇ ಶಕರು ಬ್ಯಾಂಕ್‌ನ ವಾಹನಗಳನ್ನು ವೈಯಕ್ತಿಕ ಕೆಲಸ ಕಾರ್ಯಗಳಿಗೆ ಬಳಸ ಬಾರದು ಎಂದು ಕೇಂದ್ರ ಹಣಕಾಸು ಸಚಿವಾಲಯ ಸೂಚನೆ ಹೊರಡಿಸಿದೆ.

ಸರ್ಕಾರದಿಂದ ನೇಮಕಗೊಂಡ ನಿರ್ದೇಶಕರು ಬ್ಯಾಂಕ್‌ನ ಆಡಳಿತ ಮಂಡಳಿಯ ಸಭೆಗಳು ಮತ್ತು ಮಂಡಳಿಗೆ ಸಂಬಂಧಿಸಿದ ಕೆಲಸಗಳಿಗೆ ಮಾತ್ರವೇ ಬ್ಯಾಂಕ್‌ನ ವಾಹನಗಳನ್ನು ಬಳಸಿಕೊಳ್ಳಬಹುದು. ಇದಕ್ಕೆ ಹೊರತಾದ ಕೆಲಸಗಳಿಗೆ ಬ್ಯಾಂಕ್‌ ವಾಹನ ಬಳಕೆ ಸಲ್ಲದು ಎಂದು ಸಚಿವಾಲಯ ಸ್ಪಷ್ಟವಾಗಿ ಸೂಚಿಸಿದೆ.

ಕೆಲವು ಬ್ಯಾಂಕ್‌ಗಳಿಗೆ ನೇಮಕ ಗೊಂಡ ನಿರ್ದೇಶಕರು ಆಡಳಿತ ಮಂಡಳಿಗೆ ಸಂಬಂಧಿಸದ ಕೆಲಸಗಳ ಓಡಾಟಕ್ಕೂ ಬ್ಯಾಂಕ್‌ನಿಂದಲೇ ವಾಹನ ವೆಚ್ಚವನ್ನು ಪಡೆದುಕೊಳ್ಳುತ್ತಿದ್ದಾರೆ. ಇದು ಸಲ್ಲದು. ವಿಶೇಷ ಸಂದರ್ಭಗಳಲ್ಲಿ ವಾಹನ ಬಳಸುವುದಿದ್ದರೆ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.