ADVERTISEMENT

ಬ್ಯಾಂಕ್‌, ಮೊಬೈಲ್‌ ವಿಮೆ ಸೇವೆ ದುಬಾರಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST

ನವದೆಹಲಿ : ಜಿಎಸ್‌ಟಿ ಜಾರಿಗೆ ಬರುತ್ತಿದ್ದಂತೆ ಬ್ಯಾಂಕಿಂಗ್‌, ದೂರಸಂಪರ್ಕ ಮತ್ತು ವಿಮೆ ಸೇವೆಗಳು ದುಬಾರಿಯಾಗಲಿದ್ದು,  ಈ ಬಗ್ಗೆ ಹಣಕಾಸು ಸೇವಾ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲು ಆರಂಭಿಸಿವೆ.

ಸದ್ಯಕ್ಕೆ ಬಳಕೆದಾರರು ಹಣಕಾಸು ಸೇವೆಗಳಿಗೆ ಶೇ 15ರಷ್ಟು ಸೇವಾ ತೆರಿಗೆ ಪಾವತಿಸುತ್ತಿದ್ದಾರೆ.  ಕ್ರೆಡಿಟ್‌ ಕಾರ್ಡ್‌, ಹಣಕಾಸು, ವಿಮೆ ಮತ್ತು ದೂರಸಂಪರ್ಕ ಸೇವೆಗಳನ್ನು ಶೇ 18ರ ತೆರಿಗೆ ವ್ಯಾಪ್ತಿಗೆ ತರಲಾಗಿದೆ. ತೆರಿಗೆ ಹೊರೆ ಹೆಚ್ಚಾಗಲಿರುವುದರ ಬಗ್ಗೆ ಎಸ್‌ಬಿಐ ಕಾರ್ಡ್‌ ತನ್ನ ಗ್ರಾಹಕರಿಗೆ ಎಸ್‌ಎಂಎಸ್‌ ಮೂಲಕ ಮಾಹಿತಿ ನೀಡಲು ಆರಂಭಿಸಿದೆ.

ಸ್ಟ್ಯಾಂಡರ್ಡ್‌ ಚಾರ್ಟರ್ಡ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಕೂಡ ತಮ್ಮ ಗ್ರಾಹಕರಿಗೆ ಇದೇ ಬಗೆಯ ಸಂದೇಶ ಕಳಿಸಿವೆ. ಐಸಿಐಸಿಐ ಪ್ರುಡೆನ್ಸಿಯಲ್‌ ಲೈಫ್‌ ಇನ್ಶುರನ್ಸ್‌, ಇ–ಮೇಲ್‌ ಮೂಲಕ ಮಾಹಿತಿ ನೀಡುತ್ತಿದೆ.

ADVERTISEMENT

ಸದ್ಯಕ್ಕೆ ಎಂಡೊಮೆಂಟ್‌ ಪಾಲಿಸಿಗಳ ಕಂತುಗಳಿಗೆ ಗ್ರಾಹಕರು ಶೇ 1.88 ರಷ್ಟು ಸೇವಾ ತೆರಿಗೆ ಪಾವತಿಸುತ್ತಿದ್ದಾರೆ.
ಜುಲೈ 1 ರಿಂದ ಇದು ಶೇ 2.25ಕ್ಕೆ ಏರಿಕೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.