ADVERTISEMENT

ಭಾರತ್–22 ಇಟಿಎಫ್: ಪೂರಕ ನಿಧಿ ಕೊಡುಗೆ

ಪಿಟಿಐ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST

ನವದೆಹಲಿ: ಕೋಲ್‌ ಇಂಡಿಯಾದಲ್ಲಿರುವ ಷೇರು ವಿಕ್ರಯ ಕ್ಕಾಗಿ ‘ಭಾರತ್‌–22’ ಇಟಿಎಫ್‌ನಲ್ಲಿ (ವಿನಿಮಯ ವಹಿವಾಟು ನಿಧಿ) ₹ 10 ಸಾವಿರ ಕೋಟಿ ಮೌಲ್ಯದ ಪೂರಕ ನಿಧಿ ಕೊಡುಗೆಯನ್ನು ಹಣಕಾಸು ಸಚಿವಾಲಯ ಘೋಷಿಸಿದೆ.

ಸರ್ಕಾರಿ ಸ್ವಾಮ್ಯದ 22 ಕಂಪನಿ ಗಳನ್ನು ಒಳಗೊಂಡಿರುವ ಭಾರತ್‌–22 ಇಟಿಎಫ್‌ ಅನ್ನು 2017ರ ನವೆಂಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.

ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕೇಂದ್ರ ಸರ್ಕಾರ ಹೊಂದಿರುವ ಪಾಲು ಬಂಡವಾಳ ಕಡಿಮೆ ಮಾಡಿಕೊಳ್ಳಲು ಇಟಿಎಫ್‌ ಒಂದು ಸುರಕ್ಷಿತ ಮಾರ್ಗವಾಗಿದೆ. ಈ ಮೂಲಕ ಕೋಲ್‌ ಇಂಡಿಯಾದಲ್ಲಿ ಹೊಂದಿರುವ ಶೇ 3.25ರಷ್ಟು ಷೇರುಗಳನ್ನು ಮಾರಾಟ ಮಾಡುವ ಸಾಧ್ಯತೆ ಇದೆ. 2017–18ರಲ್ಲಿ ಷೇರು ವಿಕ್ರಯದಿಂದ ₹ 1 ಲಕ್ಷ ಕೋಟಿಗೂ ಅಧಿಕ ಸಂಗ್ರಹವಾಗಿತ್ತು. 2018–19ರಲ್ಲಿ ಷೇರು ವಿಕ್ರಯದಿಂದ ₹ 80,000 ಕೋಟಿ ಸಂಗ್ರಹಿಸುವ ನಿರೀಕ್ಷೆ ಇಟ್ಟುಕೊಂಡಿದೆ.

ADVERTISEMENT

ಸಿಪಿಎಸ್‌ಇ ಇಟಿಎಫ್‌ನಲ್ಲಿ ಮೂರು ಕಂತಿನಲ್ಲಿ ಒಟ್ಟು ₹ 11,500 ಕೋಟಿ ಸಂಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.