ADVERTISEMENT

ಮರ್ಸಿಡಿಸ್‌ ಬೆಂಜ್‌ನ ಸ್ಪೋರ್ಟ್ಸ್‌ ಕಾರ್‌

ಪಿಟಿಐ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST
ಎಎಂಜಿ ಜಿಟಿ ರೋಡ್‌ಸ್ಟರ್‌ ಸ್ಪೋರ್ಟ್ಸ್‌ ಕಾರ್‌ ಪರಿಚಯಿಸಿದ ಮರ್ಸಿಡಿಸ್‌ –ಬೆಂಜ್‌ ಇಂಡಿಯಾದ ಸಿಇಒ  ರೋಲ್ಯಾಂಡ್‌ ಫೋಲ್ಗರ್‌
ಎಎಂಜಿ ಜಿಟಿ ರೋಡ್‌ಸ್ಟರ್‌ ಸ್ಪೋರ್ಟ್ಸ್‌ ಕಾರ್‌ ಪರಿಚಯಿಸಿದ ಮರ್ಸಿಡಿಸ್‌ –ಬೆಂಜ್‌ ಇಂಡಿಯಾದ ಸಿಇಒ ರೋಲ್ಯಾಂಡ್‌ ಫೋಲ್ಗರ್‌   

ನವದೆಹಲಿ: ಜರ್ಮನಿಯ ವಿಲಾಸಿ ಕಾರ್‌ ತಯಾರಿಕಾ ಸಂಸ್ಥೆ ಮರ್ಸಿಡಿಸ್‌ ಬೆಂಜ್‌, ದೇಶಿ ಮಾರುಕಟ್ಟೆಗೆ ಎರಡು ಸ್ಪೋರ್ಟ್ಸ್‌ ಕಾರ್‌ಗಳನ್ನು ಪರಿಚಯಿಸಿದೆ.

ಎಎಂಜಿ ಜಿಟಿ ಆರ್‌ ಮತ್ತು ಎಎಂಜಿ ಜಿಟಿ ರೋಡ್‌ಸ್ಟರ್‌ ಹೆಸರಿನ ಎರಡು ಮಾದರಿಯ ಕಾರುಗಳನ್ನು ಸೋಮವಾರ ಇಲ್ಲಿ ಬಿಡುಗಡೆ ಮಾಡಲಾಯಿತು. ‘ಅತ್ಯಂತ ವೇಗವಾಗಿ ಸಂಚರಿಸುವ ಈ ಸ್ಪೋರ್ಟ್ಸ್‌ ಕಾರುಗಳನ್ನು ಭಾರತಕ್ಕೆ ಪರಿಚಯಿಸಿರುವುದು ಈ ಮಾರುಕಟ್ಟೆಗೆ ಸಂಸ್ಥೆ ನೀಡಿರುವ ಮಹತ್ವಕ್ಕೆ ಸಾಕ್ಷಿಯಾಗಿದೆ. ಸ್ಥಳೀಯ ಗ್ರಾಹಕರಿಗೆ ಇವೆರಡು ಕಾರ್‌ಗಳು ಮೆಚ್ಚುಗೆಯಾಗಲಿವೆ’ ಎಂದು ಮರ್ಸಿಡಿಸ್‌ –ಬೆಂಜ್‌ ಇಂಡಿಯಾದ ಸಿಇಒ ರೋಲ್ಯಾಂಡ್‌ ಫೋಲ್ಗರ್‌ ವಿಶ್ವಾಸ ವ್ಯಕ್ತಪಡಿಸಿದರು.

  585 ಅಶ್ವಶಕ್ತಿ ಸಾಮರ್ಥ್ಯದ ಎಎಂಜಿ ಜಿಟಿಆರ್‌ 3.6 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 100 ಕೀ. ಮೀ ದೂರ ಕ್ರಮಿಸುವ ವೇಗ ಪಡೆಯಲಿದ್ದು, ಗರಿಷ್ಠ ವೇಗದ ಮಿತಿ ಗಂಟೆಗೆ 318 ಕಿ. ಮೀ ಇರಲಿದೆ.

ADVERTISEMENT

476 ಎಚ್‌ಪಿ ಸಾಮರ್ಥ್ಯದ ಜಿಟಿ ರೋಡ್‌ಸ್ಟರ್‌ನ ಪ್ರತಿ ಗಂಟೆಗೆ ಗರಿಷ್ಠ ವೇಗದ ಮಿತಿ 302 ಕಿ.ಮೀಗಳಷ್ಟಿದೆ.  ಇವುಗಳ ಎಕ್ಸ್‌ಷೋರೂಂ ಬೆಲೆ ಕ್ರಮವಾಗಿ ₹ 2.23 ಕೋಟಿ ಮತ್ತು  ₹ 2.19 ಕೋಟಿಗಳಷ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.