ADVERTISEMENT

ಮಲ್ಯ ಆಸ್ತಿ ಮತ್ತೆ ಹರಾಜು

ಪಿಟಿಐ
Published 23 ಏಪ್ರಿಲ್ 2017, 19:30 IST
Last Updated 23 ಏಪ್ರಿಲ್ 2017, 19:30 IST
ಮಲ್ಯ ಆಸ್ತಿ ಮತ್ತೆ ಹರಾಜು
ಮಲ್ಯ ಆಸ್ತಿ ಮತ್ತೆ ಹರಾಜು   

ಮುಂಬೈ: ಉದ್ಯಮಿ ವಿಜಯ್‌ ಮಲ್ಯ ಒಡೆತನದ  ‘ಕಿಂಗ್‌ಫಿಶರ್‌ ಹೌಸ್‌’  ಮಾರಾಟಕ್ಕೆ ಮರು ಚಾಲನೆ ದೊರೆತಿದೆ.

ಮುಂಬೈ ವಿಮಾನ ನಿಲ್ದಾಣದ ಬಳಿಯ  ವಿಲೆ ಪಾರ್ಲೆಯ ಕಿಂಗ್‌ ಫಿಶರ್‌ ಏರ್‌ಲೈನ್ಸ್‌ ಆಡಳಿತ ಕಚೇರಿಯಾಗಿರುವ ‘ಕಿಂಗ್‌ಫಿಶರ್‌ ಹೌಸ್‌’ ಮಾರಾಟಕ್ಕೆ ನಾಲ್ಕು ಬಾರಿ ಪ್ರಯತ್ನಿಸಲಾಗಿತ್ತು. ಆದರೆ, ಖರೀದಿದಾರರು ಸಿಗದೆ ಮಾರಾಟ ಸಾಧ್ಯವಾಗಿರಲಿಲ್ಲ.

ಗೋವಾ ಕಡಲ ಕಿನಾರೆಯಲ್ಲಿರುವ ಮಲ್ಯ ಅವರ ಕಿಂಗ್‌ಫಿಶರ್‌ ಬಂಗಲೆ  ಮಾರಾಟ ಮಾಡಿದಂತೆ  ಮುಂಬೈನ  ಆಸ್ತಿ ಮಾರಾಟ ಮಾಡಲು  ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇತೃತ್ವದ 17 ಬ್ಯಾಂಕಗಳ ಒಕ್ಕೂಟ ತೀರ್ಮಾನಿಸಿದೆ.

ADVERTISEMENT

ಒಂದು ವರ್ಷದಲ್ಲಿ  3 ಬಾರಿ  ಹರಾಜು ಹಾಕಿದ್ದರೂ ಬಂಗಲೆ ಖರೀದಿಗೆ ಯಾರೂ ಮುಂದೆ ಬಂದಿರಲಿಲ್ಲ.  ಖುದ್ದು  ಚೌಕಾಸಿಗೆ ಇಳಿದ ಬ್ಯಾಂಕ್‌ ಒಕ್ಕೂಟ, ವೀಕಿಂಗ್‌ ಮೀಡಿಯಾ ಆ್ಯಂಡ್‌ ಎಂಟರ್‌ಟೇನ್‌ಮೆಂಟ್‌ ಮುಖ್ಯಸ್ಥ ಸಚಿನ್‌ ಜೋಶಿ ಅವರಿಗೆ ₹73.01ಕೋಟಿಗೆ ಈ ಬಂಗಲೆ  ಮಾರಾಟ ಮಾಡಿತ್ತು. ಈಗ ಅದೇ ಮಾದರಿಯಲ್ಲಿ ಮುಂಬೈ ಆಸ್ತಿ  ಮಾರಾಟ ಕ್ಕೆ ಬ್ಯಾಂಕ್‌ ಒಕ್ಕೂಟ ಮುಂದಾಗಿದೆ.

ಮಾರ್ಚ್‌ನಲ್ಲಿ ನಡೆದ ನಾಲ್ಕನೇ ಹರಾಜಿನಲ್ಲಿ ಮುಂಬೈ ಕಿಂಗ್‌ಫಿಶರ್‌ ಕಟ್ಟಡಕ್ಕೆ ₹103.50 ಕೋಟಿ ನಿಗದಿ ಮಾಡಲಾಗಿತ್ತು.  ಖರೀದಿದಾರರು ಸಿಗದ ಕಾರಣ ಮೊದಲ ಹರಾಜಿನಲ್ಲಿ ₹150 ಕೋಟಿಯಿದ್ದ ಬೆಲೆಯನ್ನು ಎರಡನೇ ಹರಾಜಿನಲ್ಲಿ ₹135 ಕೋಟಿ ಮತ್ತು 2016ರ ಡಿಸೆಂಬರ್‌ನಲ್ಲಿ ನಡೆದ ಮೂರನೇ ಹರಾಜಿನಲ್ಲಿ ₹115 ಕೋಟಿಗೆ ಇಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.