ADVERTISEMENT

ಮುಂಗಾರು ಫಸಲು ಅನಿಶ್ಚಿತ; ಈರುಳ್ಳಿ ದುಬಾರಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಒಂದ ವಾರದದಿಂದ ಈಚೆಗೆ ಈರುಳ್ಳಿ ಧಾರಣೆ ಕೆ.ಜಿ.ಗೆ ₨ 8ರಿಂದ 10ರಷ್ಟು ಏರಿಕೆ ಯಾಗಿದ್ದು, ಗ್ರಾಹಕರ ಕಣ್ಣುರಿ ಹೆಚ್ಚಿಸಿದೆ.

ವಾರದ ಹಿಂದಷ್ಟೇ ಸಗಟು ಮಾರು ಕಟ್ಟೆಯಲ್ಲಿ ಈರುಳ್ಳಿ ಕೆ.ಜಿಗೆ ₨ 24, ಚಿಲ್ಲರೆ ಮಾರುಕಟ್ಟೆಯಲ್ಲಿ ₨ 30ರಿಂದ 32 ಇದ್ದ ಬೆಲೆ, ಸೋಮವಾರ ಸಗಟು ಮಾರುಕಟ್ಟೆ ಯಲ್ಲಿಯೇ ₨32 ಆಗಿದೆ. ಚಿಲ್ಲರೆ ಧಾರಣೆ ಕೆ.ಜಿ.ಗೆ ₨40ಕ್ಕೆ ಏರಿಕೆಯಾಗಿದೆ.

ಧಾರವಾಡ ಸೇರಿದಂತೆ ಸುತ್ತಮುತ್ತ ಲಿನ ಜಿಲ್ಲೆಗಳಲ್ಲಿ ಮುಂಗಾರು ಹಂಗಾ ಮಿನ ಬಿತ್ತನೆ ಈಗಷ್ಟೇ ಆಗಿದೆ. ಪ್ರತಿ ವರ್ಷ ಈ ಅವಧಿಯಲ್ಲಿ ಮಹಾರಾಷ್ಟ್ರದಿಂದ ಪೂರೈಕೆಯಾಗುವ ಈರುಳ್ಳಿ ಹುಬ್ಬಳ್ಳಿ ಮಾರುಕಟ್ಟೆ ಬೇಡಿಕೆ ಈಡೇರಿಸುತ್ತದೆ.

‘ಈ ಬಾರಿ ಮುಂಗಾರು ಕೈ ಕೊಟ್ಟಿರು ವುದರಿಂದ ಬಿತ್ತನೆಯಾದ ಈರುಳ್ಳಿ ಮೊಳಕೆಯೊಡೆದಿಲ್ಲ. ಈ ಹಂಗಾಮಿನಲ್ಲಿ ಫಸಲು ಕೈಸೇರುವುದು ಅನಿಶ್ಚಿತವಾಗಿದೆ. ಹಾಗಾಗಿ ಮಹಾರಾಷ್ಟ್ರದ ಬೆಳೆಗಾರರು ಏಕಾಏಕಿ ಈರುಳ್ಳಿ ಪೂರೈಕೆ ಕಡಿಮೆ ಮಾಡಿದ್ದಾರೆ. ಮುಂದೆ ಬೆಲೆ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆ ಯಲ್ಲಿ ದಾಸ್ತಾನು ಮಾಡಿಕೊಂಡಿದ್ದಾರೆ. ಬೇಡಿಕೆಗೆ ಅನುಗು ಣವಾಗಿ ಪೂರೈಕೆ ಆಗದ ಕಾರಣ ಈರುಳ್ಳಿ ಬೆಲೆ ಹೆಚ್ಚಳವಾಗಿದೆ’ ಎನ್ನುತ್ತಾರೆ ಹುಬ್ಬಳ್ಳಿ ಎಪಿಎಂಸಿಯ ಈರುಳ್ಳಿ ಮಾರಾಟಗಾರರ ಸಂಘದ ಅಧ್ಯಕ್ಷ ಸಲೀಂ ಬ್ಯಾಹಟ್ಟಿ.

ಬೆಂಗಳೂರು ವರದಿ: ಇಲ್ಲಿನ ಸಗಟು ಮಾರುಕಟ್ಟೆಯಲ್ಲಿಯೂ ಈರುಳ್ಳಿ ದಾರಣೆ ಯಲ್ಲಿ ಗಣನೀಯ ಏರಿಕೆಯಾಗಿದೆ. ಕ್ವಿಂಟಲ್‌ ಈರುಳ್ಳಿ ಉತ್ತಮ ದರ್ಜೆಯದು ₨2800ರಿಂದ ₨3 ಸಾವಿರ ಬೆಲೆಗೆ ಮಾರಾಟವಾಗುತ್ತಿದೆ.

ಮಧ್ಯಮ ಗಾತ್ರದ ಈರುಳ್ಳಿ ಕನಿಷ್ಠ ₨2 ಸಾವಿರ, ಗರಿಷ್ಠ ₨2,600ರಂತೆ ಹಾಗೂ ಸಣ್ಣ ಈರುಳ್ಳಿ ₨1500ರಿಂದ ₨2 ಸಾವಿರ ಲೆಕ್ಕದಲ್ಲಿ ಮಾರಾಟವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.