ADVERTISEMENT

‘ಮೂಡೀಸ್‌’ ರೇಟಿಂಗ್: ಸೆನ್ಸೆಕ್ಸ್ 414 ಅಂಶ ಏರಿಕೆ

ಏಜೆನ್ಸೀಸ್
Published 17 ನವೆಂಬರ್ 2017, 6:58 IST
Last Updated 17 ನವೆಂಬರ್ 2017, 6:58 IST
‘ಮೂಡೀಸ್‌’ ರೇಟಿಂಗ್: ಸೆನ್ಸೆಕ್ಸ್ 414 ಅಂಶ ಏರಿಕೆ
‘ಮೂಡೀಸ್‌’ ರೇಟಿಂಗ್: ಸೆನ್ಸೆಕ್ಸ್ 414 ಅಂಶ ಏರಿಕೆ   

ಮುಂಬೈ: ‘ಮೂಡೀಸ್ ಪರಿಣಾಮ’ದಿಂದ ಷೇರುಮಾರುಕಟ್ಟೆಯ ಶುಕ್ರವಾರದ ವಹಿವಾಟು ಏರಿಕೆಯೊಂದಿಗೆ ಪ್ರಾರಂಭಗೊಂಡಿದೆ.

‌‌ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 414 ಅಂಶಗಳಷ್ಟು ಏರಿಕೆ ಕಂಡಿದ್ದು 33,521 ಅಂಶಕ್ಕೆ ಜಿಗಿದಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 124.40 ಅಂಶಗಳಷ್ಟು ಏರಿದ್ದು 10,339.15 ಅಂಶ ತಲುಪಿದೆ.

ಜಾಗತಿಕ ಮಟ್ಟದ ರೇಟಿಂಗ್‌ ಏಜೆನ್ಸಿ ‘ಮೂಡೀಸ್‌’ ಭಾರತದ ದೇಶೀಯ ಮತ್ತು ಅಂತರರಾಷ್ಟ್ರೀಯ ಹಣಕಾಸು ಸ್ಥಿತಿಗತಿಯ ರೇಟಿಂಗ್ ಅನ್ನು ಉನ್ನತೀಕರಿಸಿದ್ದು ಭಾರತಕ್ಕೆ ‘ಬಿಎಎ2’ ರೇಟಿಂಗ್‌ ನೀಡಿದೆ. ಇದರ ಪರಿಣಾಮ ಷೇರುಮಾರುಕಟ್ಟೆಯ ಮೇಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.