ADVERTISEMENT

ಮ್ಯೂಚುವಲ್‌ ಫಂಡ್‌: ಸಣ್ಣ ನಗರಗಳ ಕೊಡುಗೆ ಶೇ 41

ಪಿಟಿಐ
Published 17 ಮಾರ್ಚ್ 2018, 19:30 IST
Last Updated 17 ಮಾರ್ಚ್ 2018, 19:30 IST

ಮುಂಬೈ: ಮ್ಯೂಚುವಲ್‌ ಫಂಡ್‌ ಉದ್ಯಮದ ನಿರ್ವಹಣೆಯಲ್ಲಿ ಇರುವ ಸಂಪತ್ತು ಮೌಲ್ಯದಲ್ಲಿ ಸಣ್ಣ ನಗರಗಳ ಕೊಡುಗೆಯು ಫೆಬ್ರವರಿ ತಿಂಗಳ ಅಂತ್ಯಕ್ಕೆ ಶೇ 41 ರಷ್ಟು ಹೆಚ್ಚಾಗಿದೆ.

2017ರ ಫೆಬ್ರುವರಿಯಲ್ಲಿ ₹ 3.08 ಲಕ್ಷ ಕೋಟಿ ಇತ್ತು. ಇದು 2018ರ ಫೆಬ್ರುವರಿಯಲ್ಲಿ ₹ 4.36 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ರೇಟಿಂಗ್‌ ಸಂಸ್ಥೆ ‘ಐಸಿಆರ್‌ಎ’ ತಿಳಿಸಿದೆ.

ಷೇರು ಪೇಟೆ ವಹಿವಾಟು ಇಳಿಮುಖವಾಗಿದ್ದರೂ ಷೇರು ಸಂಬಂಧಿತ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಪ್ರಮಾಣ ಉತ್ತಮವಾಗಿರಲಿದೆ ಎಂದು ಹೇಳಿದೆ.

ADVERTISEMENT

ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಮೂಲಕ ಮ್ಯೂಚುವಲ್ ಫಂಡ್‌ನಲ್ಲಿ ಹೆಚ್ಚು ಬಂಡವಾಳ ಹೂಡಿಕೆಯಾಗುತ್ತಿದೆ.

ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ನಿರ್ವಹಣೆಯಲ್ಲಿ ಇರುವ ಸಂಪತ್ತು ಮೌಲ್ಯ ₹ 22.41 ಲಕ್ಷ ಕೋಟಿಯಿಂದ ₹ 22.20 ಲಕ್ಷ ಕೋಟಿಗೆ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.