ADVERTISEMENT

ರಸಗೊಬ್ಬರ ಕೊರತೆ ಇಲ್ಲ

ಪಿಟಿಐ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ರಸಗೊಬ್ಬರ ಕೊರತೆ ಇಲ್ಲ
ರಸಗೊಬ್ಬರ ಕೊರತೆ ಇಲ್ಲ   

ನವದೆಹಲಿ: ಅಕ್ಟೋಬರ್‌ನಿಂದ ಆರಂಭವಾಗಲಿರುವ ಹಿಂಗಾರು (ರಾಬಿ) ಋತುವಿನ ಬೇಡಿಕೆ ಪೂರೈಸುವಷ್ಟು ರಸಗೊಬ್ಬರ, ಬೀಜಗಳ ಸಾಕಷ್ಟು ದಾಸ್ತಾನು ಇದೆ ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ.

ಬಿತ್ತನೆಗೆ ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದು ಸಾಕಷ್ಟು ಸಂಗ್ರಹ ಮಾಡಿಕೊಂಡ ಕಾರಣ ಬಿತ್ತನೆ ಬೀಜ, ರಸಗೊಬ್ಬರಕ್ಕೆ  ಕೊರತೆಯಾಗದು ಎಂದು ಕೃಷಿ ಸಚಿವಾಲಯ ಸ್ಪಷ್ಟಪಡಿಸಿದೆ.

ಅಕ್ಟೋಬರ್‌ಗೆ ಬಿತ್ತನೆ ಆರಂಭವಾಗಿ ಏಪ್ರಿಲ್‌ನಲ್ಲಿ  ಕೊಯ್ಲು ನಡೆಯುತ್ತದೆ. ಗೋಧಿ, ಜೋಳ, ಮೆಕ್ಕೆಜೋಳದಂತಹ ಆಹಾರಧಾನ್ಯ, ಎಣ್ಣೆಕಾಳುಗಳು, ಕಿರುಧಾನ್ಯ ಮತ್ತು ಬೇಳೆಕಾಳು ಪ್ರಮುಖ ಹಿಂಗಾರು ಬೆಳೆಗಳಾಗಿವೆ.

ಬೇಳೆಕಾಳು ಹೊರತುಪಡಿಸಿ ಬಹುತೇಕ ಎಲ್ಲ ಬಿತ್ತನೆಬೀಜ ಮತ್ತು ರಸಗೊಬ್ಬರ ಬೇಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಇದೆ ಎಂದು ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.