ADVERTISEMENT

ರೂ. ಮೌಲ್ಯ 7ವಾರದ ಕನಿಷ್ಠ

​ಪ್ರಜಾವಾಣಿ ವಾರ್ತೆ
Published 29 ಜನವರಿ 2015, 19:30 IST
Last Updated 29 ಜನವರಿ 2015, 19:30 IST

ಮುಂಬೈ(ಪಿಟಿಐ): ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ಕಳೆದ ಏಳು ವಾರಗಳಲ್ಲೇ ಕನಿಷ್ಠ ಮಟ್ಟಕ್ಕಿಳಿದಿದೆ. ರೂಪಾಯಿ ಗುರುವಾರದ ವಹಿವಾಟಿನಲ್ಲಿ 45 ಪೈಸೆ ಮೌಲ್ಯ ಕಳೆದುಕೊಂಡಿತು. ಆ ಮೂಲಕ  ಒಂದು ಡಾಲರ್‌ಗೆ ರೂ61.86ರಂತೆ ವಿನಿಮಯಗೊಂಡಿತು.

ಹಿಂದಿನ ದಿನದ ವಹಿವಾಟಿನಲ್ಲಿ ರೂಪಾಯಿ ಒಂದು ಡಾಲರ್‌ಗೆ ರೂ61.41ರಂತೆ ವಿನಿಮಯಗೊಂಡಿತ್ತು. ಕಚ್ಚಾತೈಲ ಕಂಪೆನಿಗಳು ಮತ್ತು ಚಿನ್ನಾಭರಣ ತಯಾರಕರು ಸೇರಿದಂತೆ  ಆಮದುದಾರರಿಂದ ಡಾಲರ್‌ಗೆ ಗುರುವಾರ ದಿಢೀರ್‌ ಬೇಡಿಕೆ ಹೆಚ್ಚಿತು. ಇದರಿಂದ ಡಾಲರ್ ಮೌಲ್ಯ ಹೆಚ್ಚಿಸಿಕೊಂಡರೆ, ರೂಪಾಯಿ ಬೆಲೆ ಇಳಿಮುಖವಾಯಿತು ಎಂದು ಇಲ್ಲಿನ ವಿದೇಶಿ ವಿನಿಮಯ ಮಾರುಕಟ್ಟೆ ದಲ್ಲಾಳಿ ಸಂಸ್ಥೆಗಳು ಪ್ರತಿಕ್ರಿಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.