ADVERTISEMENT

ರೆಂಟ್‌ಷೇರ್‌: ಸರಕು ಬಾಡಿಗೆ ಸೇವೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST

ಬೆಂಗಳೂರು:  ಗುಣಮಟ್ಟದ ಸರಕುಗಳ ಬಾಡಿಗೆಯನ್ನು ಒಂದೇ ವೇದಿಕೆಯಲ್ಲಿ ಒದಗಿಸುವ ಕಾರ್ಯದಲ್ಲಿ ‘ರೆಂಟ್‌ಷೇರ್‌’ ಸಂಸ್ಥೆಯು 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಹರ್ಷ ಧಾಂಡ್‌ ತಿಳಿಸಿದ್ದಾರೆ.

‘ಎಲೆಕ್ಟ್ರಾನಿಕ್‌, ವೈದ್ಯಕೀಯ ಹಾಗೂ ಕಾರ್ಯಕ್ರಮ ಸಂಘಟಿಸಲು ಬೇಕಾಗುವ ಪರಿಕರಗಳನ್ನು ರಿಯಾಯ್ತಿ ದರದಲ್ಲಿ ಒದಗಿಸಲಾಗುತ್ತಿದೆ. ಮಾಲೀಕ ಹಾಗೂ ಗ್ರಾಹಕರ ನಡುವೆ ಸೇತುವೆಯಾಗಿ ಕಂಪೆನಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮಕ್ಕಳ ಆಟಿಕೆ, ಕಂಪ್ಯೂಟರ್‌, ಸಿದ್ಧ ಉಡುಪುಗಳೂ ಸಹ ಇಲ್ಲಿ ಲಭ್ಯ ಇವೆ. ಕುಟುಂಬದ ಕಾರ್ಯಕ್ರಮದಿಂದ ಹಿಡಿದು ನೂರಕ್ಕೂ ಹೆಚ್ಚು ಮಂದಿ ಸೇರುವ ಕಾರ್ಯಕ್ರಮಕ್ಕೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸಲಾಗುವುದು. ಬಿಡುವಿಲ್ಲದ ಒತ್ತಡದ ಜೀವನದಲ್ಲಿ ಜನರ ಇಚ್ಛೆಗೆ ತಕ್ಕಂತ ವಸ್ತುಗಳನ್ನು ಪೂರೈಸಲಾಗುತ್ತಿದೆ. ಬೆಂಗಳೂರು, ದೆಹಲಿ ಹಾಗೂ ದುಬೈನಲ್ಲಿ ಕಂಪೆನಿಯ ಶಾಖೆಗಳನ್ನು  ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ನಗರಗಳಿಗೂ ವಿಸ್ತರಿಸಲಾಗುವುದು.

ADVERTISEMENT

‘ಒಂದು ದಿನದಿಂದ ಒಂದು ವರ್ಷದವರೆಗೂ ಸರಕುಗಳನ್ನು ಬಾಡಿಗೆಗೆ ಪಡೆಯಬಹುದು. ಬಳಕೆ ಮುಗಿದ ಕೂಡಲೇ ಅವಧಿಗೂ ಮುನ್ನವೇ ಬೇಕಾದರೂ ಹಿಂದಿರುಗಿಸಬಹುದು. ಯಾವುದೇ ನಿರ್ಬಂಧ ಇರುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.