ಹೈದರಾಬಾದ್: ಕಿರು ಹಣಕಾಸು ಸಂಸ್ಥೆಯಾಗಿರುವ ಭಾರತ್ ಫೈನಾನ್ಶಿಯಲ್ ಇನ್ಕ್ಲೂಷನ್ ಲಿಮಿಟೆಡ್ (ಬಿಎಫ್ಐಎಲ್), ಇಂಡಸ್ ಇಂಡ್ ಬ್ಯಾಂಕ್ ಜತೆ ವಿಲೀನಗೊಳ್ಳಲು ನಿರ್ಧರಿಸಿದೆ. ಇದಕ್ಕಾಗಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಒಪ್ಪಿಗೆ ಕೇಳಿದೆ.
ಈ ಪ್ರಸ್ತಾವಿತ ವಿಲೀನಕ್ಕೆ 2017ರ ಡಿಸೆಂಬರ್ 19 ರಂದೇ ಭಾರತೀಯ ಸ್ಪರ್ಧಾ ಆಯೋಗ ಒಪ್ಪಿಗೆ ನೀಡಿದೆ. ಆರ್ಬಿಐ ಸಹ ಸಮ್ಮತಿಸಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.
2017–18ನೇ ಹಣಕಾಸು ವರ್ಷದಲ್ಲಿ ಬಿಎಫ್ಐಎಲ್ ₹ 211 ಕೋಟಿ ನಿವ್ವಳ ಲಾಭ ಗಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.