ADVERTISEMENT

ವೈಯಕ್ತಿಕ ಮಾಹಿತಿ ನೀಡಲು ಸಲಹೆ

ಪಿಟಿಐ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ವೈಯಕ್ತಿಕ ಮಾಹಿತಿ ನೀಡಲು ಸಲಹೆ
ವೈಯಕ್ತಿಕ ಮಾಹಿತಿ ನೀಡಲು ಸಲಹೆ   

ನವದೆಹಲಿ: ತೆರಿಗೆದಾರರು ತಮ್ಮ ವೈಯಕ್ತಿಕ ಮಾಹಿತಿ ಮತ್ತು ಇತರ ವಿವರಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕೃತ ಅಂತರ್ಜಾಲ ತಾಣದಲ್ಲಿ ನವೀಕರಿಸಬೇಕು ಎಂದು ಕೇಳಿಕೊಳ್ಳಲಾಗಿದೆ.

ತೆರಿಗೆದಾರರು ತಮ್ಮ ವೈಯಕ್ತಿಕ ಇ–ಮೇಲ್‌ಗಳು, ಮೊಬೈಲ್‌, ವಿಳಾಸ ಮತ್ತು ಬ್ಯಾಂಕ್‌ ಖಾತೆಯ ವಿವರಗಳನ್ನು ನೀಡಬೇಕು ಎಂದು ಇಲಾಖೆಯು ಸಲಹೆ ನೀಡಿದೆ.

ತೆರಿಗೆದಾರರ ಇ–ಮೇಲ್ ಮತ್ತು ಮೊಬೈಲ್‌ಗಳಿಗೆ ಒಂದು ಬಾರಿ ರಹಸ್ಯಸಂಖ್ಯೆ (ಒಟಿಪಿ) ಕಳಿಸಿ ಈ ವಿವರಗಳನ್ನು ದೃಢಿಕರಿಸಿಕೊಳ್ಳಲಾಗುವುದು. ಇದರಿಂದ ತೆರಿಗೆದಾರರು ಮತ್ತು ಇಲಾಖೆ ಮಧ್ಯೆ ಉತ್ತಮ ಸಂವಹನ ಸಾಧ್ಯವಾಗಲಿದೆ. ತೆರಿಗೆದಾರರಿಗೆ ಕಳಿಸುವ ಮಾಹಿತಿ ಅವರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲೂ ಸಾಧ್ಯವಾಗಲಿದೆ.

ADVERTISEMENT

ಈಗಾಗಲೇ ಇ–ಫೈಲಿಂಗ್‌ ಮಾಡಿದವರು, https://incometaxindiaefiling.gov.in ತಾಣದಲ್ಲಿ ಲಾಗಿನ್‌ ಆಗಿ ತಮ್ಮ ಮಾಹಿತಿ ನವೀಕರಿಸಬಹುದು ಎಂದೂ ಇಲಾಖೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.