ADVERTISEMENT

ಷೇರುಪೇಟೆಯಲ್ಲಿ ಮ್ಯಾಟ್ರಿಮೋನಿ ಡಾಟ್‌ ಕಾಂ

ಪಿಟಿಐ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ನವದೆಹಲಿ : ವಧು–ವರ ಆಯ್ಕೆಯ ಆನ್‌ಲೈನ್‌ ತಾಣವಾಗಿರುವ ಮ್ಯಾಟ್ರಿಮೋನಿಡಾಟ್‌ಕಾಂ (Matrimony.com), ಗುರುವಾರ ದೇಶಿ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿತು.

ನೀಡಿಕೆ ಬೆಲೆಯಾದ ₹ 985ರ ಮಟ್ಟದಲ್ಲಿಯೇ ಪ್ರತಿ ಷೇರಿನ ಬೆಲೆ ಮುಂಬೈ ಷೇರುಪೇಟೆಯಲ್ಲಿ ವಹಿವಾಟು ಆರಂಭಿಸಿತು. ರಾಷ್ಟ್ರೀಯ ಷೇರುಪೇಟೆಯಲ್ಲಿಯೂ ಇದೇ ಬೆಲೆ ಮಟ್ಟದಲ್ಲಿ ವಹಿವಾಟು ನಡೆಯಿತು.

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ₹ 500 ಕೋಟಿ ಸಂಗ್ರಹಿಸುವ ಉದ್ದೇಶಕ್ಕೆ 4.43 ಪಟ್ಟು ಹೆಚ್ಚಿನ ಬೇಡಿಕೆ ಕಂಡು ಬಂದಿತ್ತು. ಪ್ರತಿ ಷೇರಿನ ಬೆಲೆ ಮಟ್ಟವನ್ನು ₹ 983 ರಿಂದ 985ರವರೆಗೆ ನಿಗದಿಪಡಿಸಲಾಗಿತ್ತು. ಸಂಸ್ಥೆಯು ಭಾರತ್‌ ಮ್ಯಾಟ್ರಿಮೋನಿ ಬ್ರ್ಯಾಂಡ್‌ ಹೆಸರಿನಡಿ ಅಂತರ್ಜಾಲದಲ್ಲಿ ವಧು ವರ ಆಯ್ಕೆಯ ಸೇವೆ ಒದಗಿಸುತ್ತಿದೆ.

ADVERTISEMENT

ಸಂಗ್ರಹವಾದ ಹಣವನ್ನು ಕಚೇರಿ ನಿರ್ಮಾಣ ಉದ್ದೇಶಕ್ಕೆ ಭೂಮಿ ಖರೀದಿ, ಪ್ರಚಾರ, ಜಾಹೀರಾತು, ಸಾಲ ಮರುಪಾವತಿ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.