ADVERTISEMENT

ಷೇರುಪೇಟೆ: ಟ್ರಂಪ್‌ ಪ್ರಭಾವ

ಪಿಟಿಐ
Published 22 ಜನವರಿ 2017, 19:30 IST
Last Updated 22 ಜನವರಿ 2017, 19:30 IST
ಷೇರುಪೇಟೆ: ಟ್ರಂಪ್‌ ಪ್ರಭಾವ
ಷೇರುಪೇಟೆ: ಟ್ರಂಪ್‌ ಪ್ರಭಾವ   

ನವದೆಹಲಿ: ಅಮೆರಿಕ ಹೊಸ ಅಧ್ಯಕ್ಷ  ಡೋನಾಲ್ಡ್‌ ಟ್ರಂಪ್‌ ಅನುಸರಿಸಲಿರುವ ನೀತಿಯನ್ನು ಹೂಡಿಕೆದಾರರು ಎದುರು ನೋಡುತ್ತಿದ್ದು, ಈ ಅಂತರರಾಷ್ಟ್ರೀಯ ವಿದ್ಯಮಾನ ಷೇರು ಪೇಟೆ ಮೇಲೆ ಈ ವಾರ ಪ್ರಭಾವ ಬೀರಲಿದೆ.

ಈ ವಾರ ಪ್ರಕಟವಾಗಲಿರುವ ದೇಶದ ಅಗ್ರಮಾನ್ಯ ಕಂಪೆನಿಗಳ ತ್ರೈಮಾಸಿಕ ಫಲಿತಾಂಶ  ಮತ್ತು ಕೇಂದ್ರ ಸರ್ಕಾರದ ಬಜೆಟ್‌ ಹುಟ್ಟು ಹಾಕಿರುವ ನಿರೀಕ್ಷೆಗಳು ಮಾರುಕಟ್ಟೆ ವಹಿವಾಟಿನ ದಿಕ್ಕನ್ನು ನಿರ್ಧರಿಸಲಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಗಣರಾಜ್ಯೋತ್ಸವ ದಿನಾಚರಣೆ ಪ್ರಯುಕ್ತ ಜ.26ರಂದು ಷೇರು ಮಾರುಕಟ್ಟೆಗೆ ರಜೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT