ADVERTISEMENT

ಸಗಟು ಹಣದುಬ್ಬರ 6 ತಿಂಗಳ ಗರಿಷ್ಠ

ಪಿಟಿಐ
Published 19 ನವೆಂಬರ್ 2017, 19:30 IST
Last Updated 19 ನವೆಂಬರ್ 2017, 19:30 IST
ಸಗಟು ಹಣದುಬ್ಬರ 6 ತಿಂಗಳ ಗರಿಷ್ಠ
ಸಗಟು ಹಣದುಬ್ಬರ 6 ತಿಂಗಳ ಗರಿಷ್ಠ   

ನವದೆಹಲಿ: ಸಗಟು ಹಣದುಬ್ಬರವು ಅಕ್ಟೋಬರ್‌ ತಿಂಗಳಿನಲ್ಲಿ ಆರು ತಿಂಗಳ ಗರಿಷ್ಠ ಮಟ್ಟವಾದಶೇ 3.59ಕ್ಕೆ ಏರಿಕೆ ಕಂಡಿದೆ.

ಸಗಟು ದರ ಸೂಚ್ಯಂಕದ (ಡಬ್ಲ್ಯುಪಿಐ) ಆಧಾರದ ಮೇಲೆ ಲೆಕ್ಕ ಹಾಕುವ ಹಣದುಬ್ಬರ, ಸೆಪ್ಟೆಂಬರ್‌ನಲ್ಲಿ ಶೇ 2.60ರಷ್ಟಿತ್ತು. ಇದಕ್ಕೆ ಹೋಲಿಸಿದರೆ ಶೇ 0.99ರಷ್ಟು ಏರಿಕೆಯಾಗಿದೆ.

ಈರುಳ್ಳಿ ಮತ್ತು ತರಕಾರಿಗಳ ಬೆಲೆ ಹೆಚ್ಚಾಗಿರುವುದರಿಂದ ಸಗಟು ಹಣದುಬ್ಬರ ಏರಿಕೆ ಕಂಡಿದೆ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ತಿಳಿಸಿದೆ.

ADVERTISEMENT

ಚಿಲ್ಲರೆ, ಸಗಟು ಹಣದುಬ್ಬರಗಳೆರಡೂ ಭಾರಿ ಏರಿಕೆ ಕಂಡಿವೆ. ಕೈಗಾರಿಕಾ ಪ್ರಗತಿ ಸೂಚ್ಯಂಕ ಶೇ 3.8ಕ್ಕೆ ಇಳಿದಿದೆ. ಹೀಗಾಗಿ ಡಿಸೆಂಬರ್‌‘ನಲ್ಲಿ ಆರ್‌ಬಿಐ ನಡೆಸಲಿರುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಬಡ್ಡಿದರ ಇಳಿಸುವ ನಿರೀಕ್ಷೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.