ಬೆಂಗಳೂರು: ಜಪಾನಿನ ಜನಪ್ರಿಯ ಬ್ರ್ಯಾಂಡ್ ಸಾನ್ಸೂಯಿ, ‘ಹಾರಿಜಾನ್ 2’ ಹೆಸರಿನ ಹೊಸ ಮೊಬೈಲ್ ಪರಿಚಯಿಸಿದೆ.
‘4ಜಿ’, ಗರಿಷ್ಠ ವೇಗದ ವೋಲ್ಟೆ (VoLTE), ಆಂಡ್ರಾಯ್ಡ್ 7.0 ಸೌಲಭ್ಯ ಒಳಗೊಂಡ ಈ ಮೊಬೈಲ್, ಇ–ಕಾಮರ್ಸ್ ತಾಣ ಫ್ಲಿಪ್ಕಾರ್ಟ್ನಲ್ಲಿ ಖರೀದಿಗೆ ಲಭ್ಯ ಇದೆ. ಆರಂಭಿಕ ಕೊಡುಗೆಯಾಗಿ ₹ 4,999 ಬೆಲೆ ನಿಗದಿಪಡಿಸಲಾಗಿದೆ.
2ಜಿಬಿ ರ್ಯಾಮ್, 16 ಜಿಬಿ ರೋಮ್, 5 ಮೆಗಾಪಿಕ್ಸೆಲ್ನ ಮುಂಭಾಗದ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ನ ಹಿಂಭಾಗದ ಕ್ಯಾಮೆರಾ, 5 ಇಂಚಿನ ಎಚ್ಡಿ ಪರದೆ, ತುರ್ತು ಸಂದರ್ಭದಲ್ಲಿ ಬಳಸಬಹುದಾದ ಪ್ಯಾನಿಕ್ ಬಟನ್ ಹೊಂದಿರುವ ಈ ಮೊಬೈಲ್ ಎರಡು ಬಣ್ಣಗಳಲ್ಲಿ ಲಭ್ಯ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.