ADVERTISEMENT

ಸಿಹಿ ಉತ್ಪನ್ನ ಮಾರುಕಟ್ಟೆಗೆ ಎಂಟಿಆರ್‌ ಲಗ್ಗೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST
ಸಿಹಿ ಉತ್ಪನ್ನ ಮಾರುಕಟ್ಟೆಗೆ ಎಂಟಿಆರ್‌ ಲಗ್ಗೆ
ಸಿಹಿ ಉತ್ಪನ್ನ ಮಾರುಕಟ್ಟೆಗೆ ಎಂಟಿಆರ್‌ ಲಗ್ಗೆ   

ಬೆಂಗಳೂರು: ಆಹಾರ ಉತ್ಪನ್ನಗಳ ತಯಾರಿಕಾ ಸಂಸ್ಥೆ ಎಂಟಿಆರ್, ಈಗ ಮಾರುಕಟ್ಟೆಗೆ ಹೊಸ ಸಿಹಿ ಉತ್ಪನ್ನ ಪರಿಚಯಿಸಿದೆ.

ಲಬಾನ್‌ ಸ್ಟ್ರೆಕ್ಚಿ ಮ್ಯಾನ್ (Laban stetchy man) ಹೆಸರಿನ ಜೆಲ್ಲಿ ಚಾಕಲೇಟ್‌ ಉತ್ಪನ್ನವನ್ನು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಮಾಡಿತು.

ಎಂಟಿಆರ್‌ ಫುಡ್ಸ್‌ನ ಮುಖ್ಯಕಾರ್ಯನಿರ್ವಹಣಾ ಅಧಿಕಾರಿ ಸಂಜಯ್‌ ಶರ್ಮ ಮಾತನಾಡಿ, ‘ಈ ಉತ್ಪನ್ನದ ಮೂಲಕ ಮಿಠಾಯಿ ಉತ್ಪನ್ನಗಳ ಮಾರುಕಟ್ಟೆಗೆ ಎಂಟಿಆರ್ ಲಗ್ಗೆ ಇಟ್ಟಿದೆ. ಇದಕ್ಕಾಗಿ ₹40 ಕೋಟಿ ಹೂಡಿಕೆ ಮಾಡಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಲಬಾನ್‌, ಮ್ಯಾಂಗೊ, ಆರೆಂಜ್‌, ಸ್ಟ್ರಾಬೆರ್ರಿ, ಗ್ರೀನ್‌ ಮ್ಯಾಂಗೊ ಫ್ಲೇವರ್‌ಗಳಲ್ಲಿ ಲಭ್ಯವಿದೆ. 26ಗ್ರಾಂ ಹಾಗೂ 65ಗ್ರಾಂನ ಎರಡು ಪ್ಯಾಕ್‌ಗಳಿದ್ದು, ಇವುಗಳ ದರ ಕ್ರಮವಾಗಿ ₹10 ಮತ್ತು ₹30 ಆಗಿದೆ. ಇದು ಸಂಪೂರ್ಣ ಸಸ್ಯಾಹಾರಿ ಉತ್ಪನ್ನವಾಗಿದ್ದು, ದೇಶದಾದ್ಯಂತ ಪೂರೈಕೆ ಮಾಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.