ADVERTISEMENT

ಸುಗಮ ವ್ಯಾಪಾರ–ವಹಿವಾಟು ಭಾರತಕ್ಕೆ 142ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2014, 19:30 IST
Last Updated 30 ಅಕ್ಟೋಬರ್ 2014, 19:30 IST

ವಾಷಿಂಗ್ಟನ್‌ (ಪಿಟಿಐ/ಐಎಎನ್‌ಎಸ್‌): ಸುಗಮ ವ್ಯಾಪಾರ ವಹಿವಾಟಿಗೆ ಅನುವು ಮಾಡಿಕೊಡುವ ದೇಶಗಳ ಪಟ್ಟಿಯಲ್ಲಿ ಭಾರತ 142ನೇ ಸ್ಥಾನದಲ್ಲಿದೆ.

ವಿಶ್ವಬ್ಯಾಂಕ್‌ ಪ್ರಕಟಿಸಿರುವ 12ನೇ ವಾರ್ಷಿಕ ವರದಿಯಲ್ಲಿ 189 ದೇಶಗಳ ವ್ಯಾಪಾರ ವಹಿವಾಟಿನ ಸ್ಥಾನಮಾನ ನೀಡಲಾಗಿದೆ.
2013–14ರಲ್ಲಿ ದಕ್ಷಿಣ ಏಷ್ಯಾ ವ್ಯಾಪಾರಕ್ಕೆ ಸಂಬಂಧಿಸಿದಂತೆ ಸುಧಾ­ರಣಾ ಕ್ರಮಗಳನ್ನು ಕೈಗೊಂಡ ಬಳಿಕವೂ ದೇಶದ ಕ್ರಮಾಂಕ ಕುಸಿತ ಕಂಡಿರುವುದು  ಅಚ್ಚರಿ ಮೂಡಿಸಿದೆ.

ಹೊಸ ಉದ್ದಿಮೆ ಆರಂಭಿಸುವುದಕ್ಕೆ ಸಂಬಂಧಿಸಿದಂತೆಯೂ ಭಾರತ 156ನೇ ಸ್ಥಾನದಿಂದ 158ನೇ ಸ್ಥಾನಕ್ಕೆ ಕುಸಿ­ದಿದ್ದು, ಕಟ್ಟಡ ನಿರ್ಮಾಣ ಯೊಜನೆ­ಗಳಿಗೆ ಪರವಾನಗಿ  ಪಡೆಯುವುದರಲ್ಲಿ 183ನೇ ಸ್ಥಾನದಿಂದ 184ನೇ ಸ್ಥಾನಕ್ಕೆ ಕುಸಿದಿದೆ.

ಸಿಂಗಪುರ, ನ್ಯೂಜಿಲೆಂಡ್‌, ಹಾಂಕಾಂಗ್‌, ಚೀನಾ, ಡೆನ್ಮಾರ್ಕ್‌, ದಕ್ಷಿಣ ಕೊರಿಯಾ, ನಾರ್ವೆ, ಅಮೆರಿಕ, ಬ್ರಿಟನ್‌, ಫಿನ್‌ಲೆಂಡ್‌ ಮತ್ತು ಆಸ್ಟ್ರೇಲಿಯಾ ದೇಶಗಳು ಉದ್ಯಮ ಸ್ನೇಹಿ ವಾತಾವರಣ ಇರುವ ಪ್ರಮುಖ 10 ದೇಶಗಳಾಗಿವೆ ಎಂದು ವಿಶ್ವಬ್ಯಾಂಕ್‌ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.