ADVERTISEMENT

ಸೂಚ್ಯಂಕ 212 ಅಂಶ ಜಿಗಿತ

ಪಿಟಿಐ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST
ಸೂಚ್ಯಂಕ 212 ಅಂಶ ಜಿಗಿತ
ಸೂಚ್ಯಂಕ 212 ಅಂಶ ಜಿಗಿತ   

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ  212 ಅಂಶಗಳಷ್ಟು ಚೇತರಿಕೆ ದಾಖಲಿಸಿತು.

ಗ್ರಾಹಕ ಉತ್ಪನ್ನ ತಯಾರಿಕೆ ಸಂಸ್ಥೆಗಳು (ಎಫ್‌ಎಂಸಿಜಿ), ಐಟಿ ಸಂಸ್ಥೆಗಳು ಉತ್ತಮ ಹಣಕಾಸು ಸಾಧನೆ ಮಾಡಿರುವುದರಿಂದ ಗ್ರಾಹಕರು ಈ ಷೇರುಗಳ ಖರೀದಿಗೆ ಹೆಚ್ಚಿನ ಒಲವು ತೋರಿದರು.

ಮಾರ್ಚ್‌ ತ್ರೈಮಾಸಿಕದಲ್ಲಿ ಯೆಸ್‌ ಬ್ಯಾಂಕ್‌ನ ನಿವ್ವಳ ಲಾಭವು (₹ 1,179 ಕೋಟಿ)  ಶೇ 29ರಷ್ಟು ಏರಿಕೆ ದಾಖಲಿಸಿದ್ದರಿಂದ, ಸಂವೇದಿ ಸೂಚ್ಯಂಕ ಪಟ್ಟಿಯಲ್ಲಿರುವ ಸಂಸ್ಥೆಯ ಷೇರಿನ ಬೆಲೆ ಶೇ 8.25ರಷ್ಟು ಏರಿಕೆ ಕಂಡಿತು.

ADVERTISEMENT

ಸೂಚ್ಯಂಕವು ದಿನದ ವಹಿವಾಟಿನಲ್ಲಿ 34,747.97 ಅಂಶಗಳ ಗರಿಷ್ಠ ಮಟ್ಟಕ್ಕೆ ತಲುಪಿತ್ತು. ಅಂತಿಮವಾಗಿ 212 ಅಂಶಗಳ ಹೆಚ್ಚಳ ಕಂಡು 34,713 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಈ ವರ್ಷದ ಫೆಬ್ರುವರಿ 5ರ ನಂತರದ ಗರಿಷ್ಠ ಮಟ್ಟ ಇದಾಗಿದೆ. ಅಂದು ಸೂಚ್ಯಂಕವು 34,757 ಅಂಶಗಳಿಗೆ ತಲುಪಿತ್ತು.

ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 47 ಅಂಶಗಳ ಏರಿಕೆ ಕಂಡು 10,617 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ಜಾಗತಿಕ ಷೇರುಪೇಟೆಗಳಲ್ಲಿ ಏರಿಳಿತ ಕಂಡು ಬಂದಿತು.

ವಿಪ್ರೊ ಷೇರು ನಷ್ಟ
ನಾಲ್ಕನೇ ತ್ರೈಮಾಸಿಕದಲ್ಲಿನ ಹಣಕಾಸು ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವ ಕಾರಣಕ್ಕೆ ವಿಪ್ರೊ ಷೇರಿನ ಬೆಲೆ ಶೇ 2 ರಷ್ಟು ಕುಸಿತ ಕಂಡಿತು. ಪ್ರತಿ ಷೇರಿನ ಬೆಲೆ ₹ 281.45ಕ್ಕೆ ಇಳಿಯಿತು. ಸಂಸ್ಥೆಯ ಷೇರುಪೇಟೆಯಲ್ಲಿನ ಮಾರುಕಟ್ಟೆ ಮೌಲ್ಯವು ₹ 2,597 ಕೋಟಿಗಳಷ್ಟು ಕಡಿಮೆಯಾಗಿ ₹ 1,27,325 ಕೋಟಿಗಳಿಗೆ ಇಳಿಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.