ADVERTISEMENT

ಸೋನಿ: ಗ್ರಾಹಕರನ್ನು ಆಕರ್ಷಿಸಲು ₹ 150 ಕೋಟಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ಕೆನಿಚಿರೊ
ಕೆನಿಚಿರೊ   

ಬೆಂಗಳೂರು:  ಮುಂಬರುವ ಸಾಲು, ಸಾಲು ಹಬ್ಬಹರಿದಿನಗಳಲ್ಲಿ ಖರೀದಿ ವಹಿವಾಟು ಭರ್ಜರಿಯಾಗಿ ನಡೆಯುವುದರಿಂದ ಗ್ರಾಹಕರನ್ನು ಆಕರ್ಷಿಸಲು ಮತ್ತು ಹೊಸ ಉತ್ಪನ್ನಗಳನ್ನು ಪರಿಚಯಿಸಲು ಸೋನಿಇಂಡಿಯಾ ₹ 150 ಕೋಟಿ ವೆಚ್ಚ ಮಾಡಲಿದೆ.

‘ಜಾಹೀರಾತು, ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಮಾರುಕಟ್ಟೆಗಾಗಿಯೇ ₹420 ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆನಿಚಿರೊ ಹಿಬಿ  ತಿಳಿಸಿದರು.

‘ಹಬ್ಬಗಳ ಮಾಸವಾದ ಆಗಸ್ಟ್‌ನಿಂದ ನವೆಂಬರ್‌ ಅವಧಿಯಲ್ಲಿ ಭಾರಿ ವಹಿವಾಟು ನಡೆಯುವ ಕಾರಣ ಸೋನಿ ಹೊಸ ಟಿ.ವಿ ಹಾಗೂ ಇನ್ನಿತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಿದೆ’ ಎಂದು ತಿಳಿಸಿದರು.

***
ಡಿಎಚ್‌ಎಫ್‌ಎಲ್‌
ನವದೆಹಲಿ:
ಗೃಹ ಸಾಲ ಸಂಸ್ಥೆ ಡಿಎಚ್‌ಎಫ್‌ಎಲ್‌ ಬಿಡುಗಡೆ ಮಾಡಿರುವ ಪರಿವರ್ತಿಸಲಾಗದ ಸಾಲಪತ್ರಗಳಿಗೆ (ಎನ್‌ಸಿಡಿ) ಮೊದಲ ದಿನವೇ ಆರು ಪಟ್ಟು ಬೇಡಿಕೆ ಕಂಡು ಬಂದಿದೆ.

  ಇದು ಸಂಸ್ಥೆ ಬಗ್ಗೆ ಹೂಡಿಕೆದಾರರು ಹೊಂದಿರುವ ನಂಬಿಕೆಯ ದ್ಯೋತಕವಾಗಿದೆ ಎಂದು ಡಿಎಚ್‌ಎಫ್‌ಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕಪಿಲ್‌ ವಾಧವಾನ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.