ADVERTISEMENT

ಸ್ಯಾಮ್ಸಂಗ್ ದೋಷಕ್ಕೆ ಸಾಫ್ಟ್‌ವೇರ್‌

ಪಿಟಿಐ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಸ್ಯಾಮ್ಸಂಗ್ ದೋಷಕ್ಕೆ ಸಾಫ್ಟ್‌ವೇರ್‌
ಸ್ಯಾಮ್ಸಂಗ್ ದೋಷಕ್ಕೆ ಸಾಫ್ಟ್‌ವೇರ್‌   

ಸೋಲ್‌: ಸ್ಮಾರ್ಟ್‌ಫೋನ್‌ ತಯಾರಿಕಾ ದೈತ್ಯ ಸಂಸ್ಥೆ  ಸ್ಯಾಮ್ಸಂಗ್‌,  ಇತ್ತೀಚೆಗಷ್ಟೇ ಹೊಸದಾಗಿ ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಎಸ್‌8 ಸ್ಮಾರ್ಟ್‌ಫೋನ್‌ ಪರದೆ ಕೆಂಪು ಬಣ್ಣಕ್ಕೆ  ತಿರುಗುತ್ತಿರುವ ದೋಷ ಸರಿಪಡಿಸಲು ಪ್ರತ್ಯೇಕ ಸಾಫ್ಟ್‌ವೇರ್‌ ಬಿಡುಗಡೆ ಮಾಡಲಿದೆ.

ಹೊಸ ಸ್ಮಾರ್ಟ್‌ಫೋನ್‌, ದಕ್ಷಿಣ ಕೊರಿಯ ಮತ್ತು ಅಮೆರಿಕದಲ್ಲಿ ಮಳಿಗೆಗಳಲ್ಲಿ ಮಾರಾಟಕ್ಕೆ ಬಿಡುಗಡೆ ಆಗಿದೆ. ಮುಂಗಡವಾಗಿ ಕಾದಿರಿಸಿದ್ದ ಕೆಲ ಗ್ರಾಹಕರು ಪಡೆದ ಸ್ಮಾರ್ಟ್‌ಫೋನ್‌ ಪರದೆಯಲ್ಲಿ ಅಸಹಜ ರೀತಿಯಲ್ಲಿ ಕೆಂಪು ಬಣ್ಣದ ಛಾಯೆ ಕಂಡು ಬರುತ್ತಿದೆ ಎಂದು ಕೆಲ ಗ್ರಾಹಕರು ದೂರಿದ್ದಾರೆ.  ಈ ಟೀಕೆಯು ಸಾಮಾಜಿಕ ಜಾಲ ತಾಣಗಳಲ್ಲಿ ವ್ಯಾಪಕ ಪ್ರಚಾರ ಪಡೆದಿದೆ.

ಗ್ರಾಹಕರು ತಮ್ಮ ಆದ್ಯತೆಗೆ ಅನುಗುಣವಾಗಿ  ಪರದೆಯ ವರ್ಣ ಸಂಯೋಜನೆಯನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸ್ಯಾಮ್ಸಂಗ್‌ ಸಂಸ್ಥೆಯು ಆರಂಭದಲ್ಲಿ ವಿವರಣೆ ನೀಡಿತ್ತು. ಹೆಚ್ಚಿನ ಗ್ರಾಹಕರಿಂದ ದೂರುಗಳು ಬರುತ್ತಿದ್ದಂತೆ, ಈ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಾಫ್ಟ್‌ವೇರ್‌ ಒದಗಿಸಲು ಸಂಸ್ಥೆ ಮುಂದಾಗಿದೆ. ಪರದೆಯ ವರ್ಣ ಸಂಯೋಜನೆ ಹೊಂದಾಣಿಕೆ ಮಾಡಿಕೊಳ್ಳಲು ಈ ಸಾಫ್ಟ್‌ವೇರ್‌  ನೆರವಾಗಲಿದೆ ಎಂದು  ಹೇಳಿಕೆಯಲ್ಲಿ ತಿಳಿಸಲಾಗಿದೆ.

ADVERTISEMENT

ಹೋದ ವರ್ಷ ಸಂಸ್ಥೆ ಬಿಡುಗಡೆ ಮಾಡಿದ್ದ ಗ್ಯಾಲಕ್ಸಿ ನೋಟ್‌ 7 ಫೋನ್‌ನಲ್ಲಿನ ಬ್ಯಾಟರಿ ಸ್ಫೋಟಗೊಂಡ ಪ್ರಕರಣಗಳು ವರದಿಯಾಗಿದ್ದವು. ಇದು ಸಂಸ್ಥೆಯ ಬ್ರ್ಯಾಂಡ್‌ ವರ್ಚಸ್ಸಿಗೆ  ತೀವ್ರ ಧಕ್ಕೆ ಒದಗಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.