ADVERTISEMENT

ಹಣಕಾಸು ಸಾಧನೆ ಸುಧಾರಣೆ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 29 ಮೇ 2016, 19:30 IST
Last Updated 29 ಮೇ 2016, 19:30 IST

ಬೆಂಗಳೂರು: ಹಣಕಾಸು ಸಾಧನೆ ಸುಧಾರಿಸಲು ಹಲವಾರು ರಚನಾತ್ಮಕ ಕ್ರಮ ಕೈಗೊಳ್ಳಲಾಗಿದ್ದು, 2016–17ನೆ ಹಣಕಾಸು ವರ್ಷದಲ್ಲಿ ಉತ್ತಮ ಫಲಿತಾಂಶ  ಬರುವ ಸಾಧ್ಯತೆ ಇದೆ ಎಂದು ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್‌ ತಿಳಿಸಿದೆ.

ಕಳೆದ ಹಣಕಾಸು ವರ್ಷದಲ್ಲಿ ಚಿಲ್ಲರೆ, ಎಸ್‌ಎಂಇ ಮತ್ತು ಕೃಷಿ ಸಾಲ ಶೇ 29 ರಿಂದ ಶೇ 58ರಷ್ಟು ಏರಿಕೆ ದಾಖಲಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಸಾಲ ನೀಡಿಕೆಯು ಶೇ 10ರಿಂದ ಶೇ 12ರಷ್ಟು ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ.

ಚಿಲ್ಲರೆ ವಹಿವಾಟು, ಡಿಜಿಟಲಿಕರಣ ಮತ್ತು ಪರಿವರ್ತನೆಯತ್ತ ಬ್ಯಾಂಕ್‌ ಸರಿಯಾದ ದಿಸೆಯಲ್ಲಿ ಸಾಗಿದ್ದು, ಉತ್ತಮ ಹಣಕಾಸು ಸಾಧನೆ ನಿರೀಕ್ಷಿಸಲಾಗಿದೆ ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.