ADVERTISEMENT

ಹ್ಯಾನೋವರ್‌ನಲ್ಲಿ ‘ಇಮೊ’ಮೇಳ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2017, 19:30 IST
Last Updated 12 ಫೆಬ್ರುವರಿ 2017, 19:30 IST

ಬೆಂಗಳೂರು:  ತಯಾರಿಕಾ ವಲಯ ಮತ್ತು ಲೋಹ ಸಂಬಂಧಿ ಕ್ಷೇತ್ರದ  ಪ್ರಮುಖ ಜಾಗತಿಕ ಪ್ರದರ್ಶನ ಮತ್ತು ವ್ಯಾಪಾರ ಮೇಳ ‘ಇಮೊ’ ಸೆಪ್ಟೆಂಬರ್‌ 18ರಿಂದ 23ರವರೆಗೆ ಜರ್ಮನಿಯ ಹ್ಯಾನೋವರ್‌ನಲ್ಲಿ ನಡೆಯಲಿದೆ.

40 ರಾಷ್ಟ್ರಗಳ 1,700 ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿದ್ದು ಒಂದೇ ವೇದಿಕೆಯ ಅಡಿ ತಯಾರಿಕಾ ವಲಯದ ವೈವಿಧ್ಯಮ ಹೊಸ ಜಾಗತಿಕ ತಂತ್ರಜ್ಞಾನ ಅನಾವರಣಗೊಳ್ಳಲಿದೆ.

ಜಗತ್ತಿನ ಮೂಲೆ, ಮೂಲೆಗಳಿಂದ ಬರುವ ತಯಾರಿಕಾ  ವಲಯದ ಸಂಸ್ಥೆಗಳಿಂದ ಅತ್ಯಾಧುನಿಕ ಯಂತ್ರೋಪಕರಣ ಮತ್ತು ತಂತ್ರಜ್ಞಾನ ಪ್ರದರ್ಶನ ಮತ್ತು ಕೋಟ್ಯಂತರ ಮೊತ್ತದ ವಹಿವಾಟು ನಡೆಯಲಿದೆ ಎಂದು ಇಮೊ ಹ್ಯಾನೋವರ್‌ ವ್ಯವಸ್ಥಾಪಕ ನಿರ್ದೇಶಕ ಕ್ರಿಸ್ಟೋಫರ್‌   ಮಿಲ್ಲರ್‌  ತಿಳಿಸಿದರು.

ಬ್ರಿಕ್ಸ್‌ ರಾಷ್ಟ್ರಗಳ ಪೈಕಿ ಕೈಗಾರಿಕಾ ಉತ್ಪಾದನೆ ಮತ್ತು ಬಂಡವಾಳ ಹೂಡಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ಮಷಿನ್‌ ಟೂಲ್ಸ್‌ ಕೈಗಾರಿಕೆ ಕ್ಷೇತ್ರದಲ್ಲಿ ವಿಶ್ವದ ಎಂಟನೇ ದೊಡ್ಡ  ಮಾರುಕಟ್ಟೆಯಾಗಿದೆ.  ಹೀಗಾಗಿ ಭಾರತದ ಮಾರುಕಟ್ಟೆ ಅವಕಾಶಗಳ ಕುರಿತು ಚರ್ಚಿಸಲು ಮೇಳದಲ್ಲಿ ‘ಇಂಡಿಯಾ ಡೇ’ ಆಯೋಜಿಸಿದೆ.  ಭಾರತದ ಉದ್ಯಮಿಗಳು, ತಜ್ಞರು, ಕೈಗಾರಿಕಾ ಸಂಘಟನೆ, ವಾಣಿಜ್ಯೋದ್ಯಮ ಸಂಘಗಳ  ಪದಾಧಿಕಾರಿಗಳು ಈ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ರಿಸ್ಟೋಫರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.