ADVERTISEMENT

ಜನವರಿಯಿಂದ ಔಡಿ, ಮಾರುತಿ ಕಾರು ದುಬಾರಿ

ಪಿಟಿಐ
Published 27 ನವೆಂಬರ್ 2023, 14:09 IST
Last Updated 27 ನವೆಂಬರ್ 2023, 14:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ರಾಯಿಟರ್ಸ್ ಚಿತ್ರ

ನವದೆಹಲಿ: ಔಡಿ ಮತ್ತು ಮಾರುತಿ ಸುಜುಕಿ ಇಂಡಿಯಾ ಕಂಪನಿಗಳು ಮುಂದಿನ ವರ್ಷದ ಜನವರಿ 1ರಿಂದ ವಾಹನಗಳ ಬೆಲೆ ಹೆಚ್ಚಿಸುವುದಾಗಿ ಸೋಮವಾರ ಹೇಳಿವೆ.

ADVERTISEMENT

ಐಷಾರಾಮಿ ಕಾರು ತಯಾರಿಸುವ ಔಡಿ ಕಂಪನಿಯು ಭಾರತದಲ್ಲಿ 2024ರ ಜನವರಿ 1ರಿಂದ ತನ್ನೆಲ್ಲಾ ಕಾರುಗಳ ಬೆಲೆ  ಶೇ 2ರವರೆಗೆ ಹೆಚ್ಚಿಸುವುದಾಗಿ ಸೋಮವಾರ ಹೇಳಿದೆ.

ತಯಾರಿಕೆ ಮತ್ತು ಕಾರ್ಯಾಚರಣಾ ವೆಚ್ಚಗಳ ಏರಿಕೆ ಆಗಿರುವುದರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.

ಮಾರುತಿ ಸುಜುಕಿ ಇಂಡಿಯಾ ಕಂಪನಿಯು 2024ರ ಜನವರಿಯಿಂದ ತನ್ನ ವಾಹನಗಳ ಬೆಲೆಯನ್ನು ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಆದರೆ, ಬೆಲೆ ಏರಿಕೆ ಪ್ರಮಾಣವನ್ನು ತಿಳಿಸಿಲ್ಲ.

ಸರಕುಗಳ ದರ ಏರಿಕೆ ಮತ್ತು ಹಣದುಬ್ಬರದಿಂದ ವೆಚ್ಚದಲ್ಲಿ ಆಗಿರುವ ಹೆಚ್ಚದಿಂದಾಗಿ ಈ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಬೆಲೆ ಏರಿಕೆಯು ಮಾದರಿಯಿಂದ ಮಾದರಿಗೆ ವ್ಯತ್ಯಾಸ ಆಗಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.