ADVERTISEMENT

‘ಡೆನಿಮ್‌ ಫಾರ್‌ ಗುಡ್‌’ ಉತ್ಪನ್ನ ಮಾರುಕಟ್ಟೆಗೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 19:58 IST
Last Updated 3 ಜುಲೈ 2018, 19:58 IST
ಅರವಿಂದ್ ಲಿಮಿಟೆಡ್‌ ಸಂಸ್ಥೆಯ ಡೆನಿಮ್‌ ಉತ್ಪನ್ನಗಳ ಸಿಇಒ ಅಮೀರ್ ಅಖ್ತರ್‌ ಅವರು ಹೊಸ ಉತ್ಪನ್ನಗಳನ್ನು (ಎಡದಿಂದ ಎರಡನೇಯವರು) ಪರಿಚಯಿಸಿದರು. 
ಅರವಿಂದ್ ಲಿಮಿಟೆಡ್‌ ಸಂಸ್ಥೆಯ ಡೆನಿಮ್‌ ಉತ್ಪನ್ನಗಳ ಸಿಇಒ ಅಮೀರ್ ಅಖ್ತರ್‌ ಅವರು ಹೊಸ ಉತ್ಪನ್ನಗಳನ್ನು (ಎಡದಿಂದ ಎರಡನೇಯವರು) ಪರಿಚಯಿಸಿದರು.    

ಬೆಂಗಳೂರು:ಡೆನಿಮ್‌ ಉತ್ಪನ್ನಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ತಯಾರಿಸುವ ಅರವಿಂದ್‌ ಲಿಮಿಟೆಡ್‌ ಸಂಸ್ಥೆಯು,ಕೃತಕ ನೂಲು ತಯಾರಿಸುವ ಇನ್‌ವಿಸ್ತಾ ಸಂಸ್ಥೆಯ ಜತೆಗೂಡಿ‘ಡೆನಿಮ್ ಫಾರ್ ಗುಡ್’ ಬ್ರ್ಯಾಂಡ್‍ನ ವಿನೂತನ ಉತ್ಪನ್ನಗಳನ್ನುಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

‘ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಹೊಸ ಬಗೆಯ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಫ್ಯಾಷನ್‌ ಜಗತ್ತಿಗೆ ಅತಿ ಹೆಚ್ಚಿನ ಕೊಡುಗೆ ನೀಡುತ್ತಿದ್ದೇವೆ. ಡೆನಿಮ್‌ನ ಹೊಸ ಉತ್ಪನ್ನಗಳು ಶೀಘ್ರವೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ’ ಎಂದು ಅರವಿಂದ್‌ ಲಿಮಿಟೆಡ್‌ನ ಡೆನಿಮ್‌ ಸಿಇಒ ಅಮೀರ್‌ ಅಖ್ತರ್‌ ತಿಳಿಸಿದರು.

‘ನಾವು ನಿರಂತರವಾಗಿ ಪರಿಸರ ಸ್ನೇಹಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಈ ಮೂಲಕ ಹೊಸ ವಿನ್ಯಾಸಗಳ ಜತೆಯಲ್ಲಿ ಆರಾಮದಾಯಕ ಮತ್ತು ದೀರ್ಘಬಾಳಿಕೆಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಈ ಉತ್ಪನ್ನಗಳನ್ನು ಗ್ರಾಹಕರು ಮೆಚ್ಚಿಕೊಂಡಿದ್ದಾರೆ. ಭಾರತದಲ್ಲಿ ಡೆನಿಮ್‌ ಉದ್ಯಮವುಜಿಡಿಪಿಗಿಂತಲೂ ದುಪ್ಪಟ್ಟು ಅಂದರೆ, ವಾರ್ಷಿಕ ಶೇ 12 ರಿಂದ ಶೇ 14 ರಷ್ಟು ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.