ADVERTISEMENT

ಏರಿಳಿತಗಳ ಒತ್ತಡದಲ್ಲಿ ಪೇಟೆ ವಹಿವಾಟು

ಕೆ.ಜಿ ಕೃಪಾಲ್
Published 12 ಅಕ್ಟೋಬರ್ 2014, 19:30 IST
Last Updated 12 ಅಕ್ಟೋಬರ್ 2014, 19:30 IST

ಮು ಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕದ ಈ ವಾರದ ಚಲನೆಗಳನ್ನು ಪರಿಶೀಲಿಸಿದಾಗ ಷೇರುಪೇಟೆ ಯಾವ ದಿಕ್ಕಿನಲ್ಲಿ ಸಾಗಿದೆ ಎಂದು ನಿರ್ಧರಿಸುವುದು ದುಸಾಧ್ಯ. ಈ ವಾರ ಸಂವೇದಿ ಸೂಚ್ಯಂಕವು ಬುಧವಾರದಂದು ಮಧ್ಯಂತರದಲ್ಲಿ 26,150 ಅಂಶಗಳಲ್ಲಿದ್ದು  ಗುರುವಾರ 26,688 ಅಂಶಗಳ ಗರಿಷ್ಠ ಹಂತ ತಲುಪಿ 26,297 ಅಂಶಗಳಲ್ಲಿ  ಕೊನೆಗೊಂಡಿದೆ. ಕೇವಲ 4 ದಿನಗಳ ಚಟುವಟಿಕೆ­ಯಾದರೂ ಮಂಗಳವಾರ 296 ಅಂಶ ಇಳಿಕೆ ಕಂಡ ಸಂವೇದಿ ಸೂಚ್ಯಂಕ ಬುಧವಾರ 25 ಅಂಶಗಳ ಇಳಿಕೆಯಿಂದ ತಟಸ್ಥವಾಗಿತ್ತು. ಗುರುವಾರ 390ಅಂಶ ಏರಿಕೆ ದಾಖಲಿಸಿ ಶುಕ್ರವಾರ 339 ಅಂಶಗಳ ಇಳಿಕೆ ಕಂಡಿತು.

ಒಟ್ಟಾರೆ 270 ಪಾಯಿಂಟುಗಳ ಈ ಕುಸಿತದ ಹಿಂದೆ ವಿದೇಶಿ ವಿತ್ತೀಯ ಸಂಸ್ಥೆಗಳ ₨2,514 ಕೋಟಿ ಮೌಲ್ಯದ ನಿವ್ವಳ ಮಾರಾಟದ ಅಂಶ ಅಡಕವಾಗಿದೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ಒಟ್ಟು ₨2172 ಕೋಟಿ ನಿವ್ವಳ ಹೂಡಿಕೆಯು ಸಂವೇದಿ ಸೂಚ್ಯಂಕದ ಕುಸಿತವನ್ನು ತಡೆಯ­ದಾಯಿತು. ಸಂವೇದಿ ಸೂಚ್ಯಂಕವು ಆಗಸ್ಟ್ 20 ರಂದು ತಲುಪಿದ್ದ ಮಟ್ಟಕ್ಕೆ ಇಳಿದಿದೆ. ಇಂತಹ ವಾತಾವರಣ­ದಲ್ಲೂ ಅನೇಕ ಕಂಪೆನಿಗಳು ಉತ್ತಮ ಏರಿಕೆ ಪ್ರದರ್ಶಿಸಿದವು.

ಸಾರ್ವಜನಿಕ ವಲಯದ ಒ.ಎನ್‌.ಜಿ.ಸಿ. ಕಂಪೆನಿಯಿಂದ ₨557 ಕೋಟಿ ಮೌಲ್ಯದ ಆರ್‍ಡರ್‌ಗಳನ್ನು ಪಡೆದ ಕಾರಣಕ್ಕಾಗಿ ಅಬಾಸ್‌ ಆಫ್‌ ಪೋರ್‌ ಕಂಪೆನಿಯು ಶುಕ್ರವಾರ ₨546 ಸಮೀಪದಿಂದ ₨651ರ ವರೆಗೂ ಏರಿಕೆ ಕಂಡು ₨621 ರಲ್ಲಿ ಕೊನೆಗೊಂಡಿತು.
ಜೆಟ್‌ ಏರ್‌ವೇಸ್‌ ಕಂಪೆನಿಯು ಶುಕ್ರವಾರ­ದಂದು  ₨219ರ ಕನಿಷ್ಠದಿಂದ ₨247ರ ವರೆಗೂ ಏರಿಕೆ ಕಂಡಿದೆ. ಈ ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆ ನವೆಂಬರ್‌ 1 ರಂದು ಇರುವುದು ಮುಂದಿನ ದಿನಗಳಲ್ಲಿ ಷೇರು ಚುರುಕಾಗಿರಿಸ­ಬಹುದು.

ಅಪೋಲೊ ಟೈರ್ಸ್ ಕಂಪೆನಿಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳ ಹೂಡಿಕೆಯ ಮಿತಿಯನ್ನು ಶೇ 40 ರಿಂದ 45ಕ್ಕೆ ಹೆಚ್ಚಿಸಿದ ಕಾರಣ ಷೇರಿನ ಬೆಲೆಯು ₨197ರ ಹಂತದಿಂದ ₨ 225ರ ವರೆಗೂ ಏರಿಕೆ ಕಾಣುವಂತಾಯಿತು. ಬಿ.ಎಚ್‌.ಇ.ಎಲ್‌. ಕಂಪೆನಿಗೆ ಎರಡು 660 ಮೆಗಾವಾಟ್‌ ಪವರ್‌ ಪ್ರಾಜೆಕ್ಟ್ ಗಾಗಿ ಇಪಿಸಿ ಕಾಂಟ್ರಾಕ್ಟ್ ಲಭ್ಯವಾದ ಕಾರಣ ಷೇರಿನ ಬೆಲೆ ₨195ರ ಸಮೀಪದಿಂದ ₨224ರ ವರೆಗೂ ಜಿಗಿಯಿತು.

ಇನ್ಫೊಸಿಸ್‌ ಕಂಪೆನಿಯ ನಿರೀಕ್ಷೆಗೆ ಮೀರಿದ ಉತ್ತಮ ಫಲಿತಾಂಶ, ಆಕರ್ಷಕ ಬೋನಸ್‌ ಮತ್ತು ಲಾಭಾಂಶದ ಕಾರಣ ₨243 ರಷ್ಟು ಏರಿಕೆ ಕಂಡು ₨3645 ರಿಂದ ₨3888 ರ ವರೆಗೂ ತಲುಪಿದೆ. ಶುಕ್ರವಾರ ಸಂವೇದಿ ಸೂಚ್ಯಂಕವು 339 ಅಂಶ ಇಳಿಕೆಗೆ ಸೀಮಿತಗೊಳ್ಳಲು ಇನ್ಫೊಸಿಸ್‌  ಸುಮಾರು 134 ಅಂಶಗಳ ಏರಿಕೆ ಕಾರಣವಾಗಿದೆ. ಇಲ್ಲದಿದ್ದರೆ ಸಂವೇದಿ ಸೂಚ್ಯಂಕ 474 ಅಂಶಗಳ ಕುಸಿತ ತಲುಪುತ್ತಿತ್ತು.

ಆಪ್‌ಕೊಟೆಕ್ಸ್ ಇಂಡಸ್ಟ್ರೀಸ್‌ ಲಿ. ಕಂಪೆನಿಯು ಈ ತಿಂಗಳ ಕೊನೆವಾರದಲ್ಲಿ ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದ್ದು ಕಂಪೆನಿ ನಿರ್ದೇಶಕರು,  ಪ್ರವರ್ತಕರು, ನಿಯಮಿತ ನೌಕರರು ವ್ಯವಹರಿಸುವ ಗವಾಕ್ಷಿಯನ್ನು ಮುಚ್ಚ­ಲಾಗಿದೆ. ಶುಕ್ರವಾರ ಕಂಪೆನಿಯ ಷೇರಿನ ಬೆಲೆಯು ₨325 ರಿಂದ ₨378ರ ವರೆಗೂ ಏರಿಕೆ ಕಂಡಿದೆ. ಈ ಕಂಪೆನಿಯ ಷೇರಿನ ಮುಖ ಬೆಲೆ ₨5.

ಬೋನಸ್‌ ಷೇರು
*ಇನ್ಫೊಸಿಸ್‌ ಕಂಪೆನಿಯು 1:1ರ ಅನುಪಾತದ ಬೋನಸ್‌ ಷೇರು ಪ್ರಕಟಿಸಿದೆ.
*ಆರ್ಣವ್‌ ಕಾರ್ಪೋರೇಷನ್‌ ಲಿ. ಕಂಪೆನಿ ವಿತರಿಸಲಿರುವ 49:50ರ ಅನುಪಾತದ ಬೋನಸ್‌ ಷೇರಿಗೆ 20ನೇ ಅಕ್ಟೋಬರ್‌ ನಿಗದಿತ ದಿನವಾಗಿದೆ. 17 ರಿಂದ  ಬೋನಸ್‌­ರಹಿತ ವಹಿವಾಟು ಆರಂಭ­ವಾಗಲಿದೆ.

ಹಕ್ಕಿನ ಷೇರು
ವಾಸ್ಕನ್‌ ಇಂಜಿನಿಯರ್ಸ್ ಕಂಪೆನಿ­ 20 ರಂದು ಹಕ್ಕಿನ ಷೇರು ವಿತರಣೆ ಬಗ್ಗೆ ಪರಿಶೀಲಿಸಲಿದೆ.

ಟಿ ಗುಂಪಿಗೆ ಸೇರ್ಪಡೆ 
ಅಕ್ಟೋಬರ್‌ 10 ರಿಂದ ಆಮ್‌ಪೋರ್ಜ್ ಇಂಡಸ್ಟ್ರೀಸ್‌, ಡಾಟ್‌ ಕಾಂ ಗ್ಲೋಬಲ್‌, ಡೈನಾಕಾನ್‌ ಸಿಸ್ಟಮ್ಸ್, ಎಲೆಕ್ಟ್ರೊ ಥರ್ಮ್‌, ಇಂಡಿಯಾ ಬುಲ್‌ ಪವರ್‌,  ಜ್ಯೋತಿ  ಓವರ್ಸಿಸ್‌, ಲಿಂಕ್‌ ಫಾರ್ಮಾ, ಮಿಡ್‌ ಲ್ಯಾಂಡ್‌ ಪೊಲಿಮರ್ಸ್, ಪಂಕಜ್‌ ಪೊಲಿಮರ್ಸ್‌, ಆರ್‌.ಆರ್‌. ಫೈನಾನ್ಸಿ­ಯಲ್‌ ಕನ್ಸಲ್ಟಂಟ್‌, ಕಾರ್ಯನ್‌ ರಿಸೋರ್ಸ್‌ಸ್‌ ಶ್ರೇಯಸ್‌ ಶಿಪ್ಲಿಂಗ್‌, ಸುರಾನ ಇಂಡಸ್ಟ್ರೀಸ್‌, ವಿಪುಲ್‌ ಸೇರಿ ಒಟ್ಟು 83 ಕಂಪೆನಿಗಳನ್ನು ಟಿ ಗುಂಪಿಗೆ ಸೇರಿಸಲಾಗಿದೆ. ಉಳಿದಂತೆ 276 ಕಂಪೆನಿಗಳನ್ನು ಟಿ ಗುಂಪಿನಲ್ಲಿ ಮುಂದುವರಿಸಲಾಗಿದೆ.

ಅಮಾನತು ತೆರವು
*2001ರ ಸೆಪ್ಟಂಬರ್‌ನಿಂದಲೂ ಅಮಾ­ನತು­ಗೊಂಡಿದ್ದ ಸುಪರ್ಬ್ ಪೇಪರ್‌ ಮಿಲ್ಸ್ ಲಿ; ಅಮಾನತು ತೆರವುಗೊಳಿಸಿ­ಕೊಂಡು ಅಕ್ಟೋಬರ್‌ 15 ರಿಂದ ಪಿ ಗುಂಪಿ­ನಲ್ಲಿ ವಹಿವಾ­ಟಾಗಲಿದೆ.
*ಪ್ರಿಸ್ಮ್ ಫೈನಾನ್ಸ್ ಲಿ. ಕಂಪೆನಿಯ ಮೇಲೆ 2007ರ ಡಿಸೆಂಬರ್‌ನಲ್ಲಿ ವಿಧಿಸಿದ್ದ ಅಮಾನತು ತೆರವುಗೊಳಿಸಿದ ಕಾರಣ ಅಕ್ಟೋಬರ್‌ 15 ರಿಂದ ಪಿ ಗುಂಪಿನಲ್ಲಿ  ವಹಿವಾಟಿಗೆ ಬಿಡುಗಡೆ­ಯಾಗಲಿದೆ.

ಬಿರ್ಲಾ ಸನ್‌ಲೈಫ್‌ ಮ್ಯುಚುಯಲ್‌ ಫಂಡ್‌ ಅ.7 ರಂದು 5.78 ಲಕ್ಷ ಷೇರು ಖರೀದಿಸಿದೆ. ಅಂದೆ ಕ್ರೆಡಿಟ್‌ ಸೂಸ್‌ (ಸಿಂಗಪುರ) 3.34 ಲಕ್ಷ ಷೇರನ್ನು ಗೋಲ್‌್ಡಮನ್‌ ಸಾಕ್‌್ಸ ಇನ್ವೆಸ್‌್ಟಮೆಂಟ್‌್ಸ ಮಾರಿ­ಷಸ್‌ 2.90 ಲಕ್ಷ ಷೇರನ್ನು ಮಾರಾಟ ಮಾಡಿವೆ.
9 ರಂದು ಪುನಃ 2.11 ಲಕ್ಷ ಷೇರನ್ನು ಕ್ರೆಡಿಟ್ ಸೂಸ್‌ (ಸಿಂಗಪುರ) ಮತ್ತು 1.07 ಲಕ್ಷ ಷೇರನ್ನು ಗೋಲ್‌್ಡಮನ್‌ ಸಾಕ್‌್ಸ ಇನ್ವೆಸ್‌್ಟಮೆಂಟ್‌್ಸ ಮಾರಿಷಸ್‌ ಮಾರಾಟ ಮಾಡಿವೆ.

ಪಿರಿಯಾಡಿಕ್‌ ಕಾಲ್‌ ಆ್ಯಕ್ಷನ್‌
ವಿರಳವಾದ ವಹಿವಾಟು ಅಲ್ಪ ವಹಿವಾಟು, ಸುಲಭವಾಗಿ ವ್ಯವಹಾರ ನಡೆಯದೆ ಇರುವ 388 ಕಂಪೆನಿಗಳನ್ನು ಈ ಪಿರಿಯಾಡಿಕ್‌ ಕಾಲ್‌ ಆ್ಯಕ್ಷನ್‌ ಪಟ್ಟಿಯಲ್ಲಿ ಸೇರಿಸಲಾಗಿದೆ. ನೋಂದಾ­ಯಿ­ಸಿದ ಆರ್ಡರ್‌ಗಳು ವಹಿವಾಟಾಗಿ ಮಾರ್ಪಡದಿದ್ದರೆ ಎರಡು ಗಂಟೆಗಳ ನಂತರ ಹೊಸ ಸೆಕ್ಷನ್‌ನಲ್ಲಿ ಪುನಃ ಆರ್ಡರ್‌ ನೋಂದಾಯಿಸ­ಬೇಕಾಗು­ವುದು. ಈ ಹೊಸ ಪಟ್ಟಿಯು ಅ.13 ರಿಂದ ಜಾರಿಯಾ­ಗುವುದು.

ಹೂಡಿಕೆದಾರರ ಗಮನಕ್ಕೆ
ಅಕ್ಟೋಬರ್‌ 15 ರಂದು ಮುಂಬೈನಲ್ಲಿ ವಿಧಾನಸಭಾ ಚುನಾವಣೆ ಕಾರಣ ಷೇರು ವಿನಿಮಯ ಕೇಂದ್ರಗಳಿಗೆ ರಜೆ ನೀಡಲಾಗಿದೆ.

ADVERTISEMENT

ವಾರದ ವಿಶೇಷ
ಅರಿತು ಹೂಡಿಕೆ ಮಾಡಿ, ಅನುಸರಿಸಬೇಡಿ

ಇತ್ತೀಚೆಗೆ ಇ–ಕಾಮರ್ಸ್‌ ಸಂಸ್ಥೆಯು ಭಾರಿ ಕಡಿತದ ಮಾರಾಟದ ದಿನವೆಂದು ಕಲ್ಪನೆಗೂ ಮೀರಿದ ರಿಯಾಯ್ತಿ ಬೆಲೆಯಲ್ಲಿ ವಿವಿಧ ಸಾಮಾಗ್ರಿಗಳನ್ನು ಮಾರಾಟಕ್ಕೆ ಮುಂದಾಯಿತು. ಈ ಪೂರ್ಣ ಪ್ರತಿಕ್ರಿ­ಯೆಯು ಎಲ್ಲಾ ಸೂಸೂತ್ರವಾಗದೆ ಅನೇಕ ಗೊಂದಲ­ಗಳನ್ನು ಸೃಷ್ಠಿಸಿತು. ಕಂಪೆನಿಯೂ ಇದಕ್ಕಾಗಿ ಕ್ಷಮೆಯಾಚಿಸಿ­ತಾದರೂ ಗ್ರಾಹಕರಿಗಾದ ಲೋಪ-­ಗಳನ್ನು ಸರಿಪಡಿ­ಸಲು ಪ್ರಯತ್ನಿಸಿಲ್ಲ.

ವಿವಿಧ ನಿಯಂತ್ರಕರ ಹಾಗೂ ವರ್ತಕ ಸಂಘಗಳ ಕೆಂಗಣ್ಣಿಗೂ ಗುರಿಯಾಗಿದೆ. ಈ ರೀತಿಯ ಭಾರಿ ರಿಯಾಯ್ತಿ ಮಾರಾಟವು ಅನೇಕ ಪ್ರಶ್ನೆಗಳನ್ನು ಕೆದಕಿದೆ. ಈ ಬೆಲೆಗಳು ಸಹಜವಾಗಿಯೇ ರಿಯಾಯ್ತಿಯಾಗಿ ಉತ್ಪಾದನೆಯ ಬೆಲೆಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾದರೆ ಆ ಸಾಮಾಗ್ರಿಗಳು ಕಳಪೆಯಾಗಿವೆಯೆ? ಅಥವಾ ಮಾರಾಟಗಾರರಿಗೆ ಲಾಭದ ಅಂಶ (ಪ್ರಾಫಿಟ್‌ ಮಾರ್ಜಿನ್‌) ಅಂಥಹ ಮಟ್ಟದಲ್ಲಿದೆಯೆ? ಅಥವಾ ಮಾರಾಟಗಾರರು ತಮ್ಮ ಸ್ಟಾಕ್‌ ಕ್ಲಿಯರ್‌ ಮಾಡಲು ಈ ಹಾದಿಯೆ? ಒಟ್ಟಿನಲ್ಲಿ ಅನೇಕ ಗ್ರಾಹಕರು ಬಲಿಪಶುಗಳಾದರು.

ಇದು ಕಾಂಪಿಟೇಷನ್‌ನ ಪರಮಾವಧಿ. ಗಾರೆ–ಇಟ್ಟಿಗೆ, ಮಳಿಗೆ­ಗಳ ವರ್ತಕರನ್ನೂ ತುಳಿಯು­ವಂತಾ­ಗಿದೆ.ಗ್ರಾಹಕರು, ಹೂಡಿಕೆ­ದಾರರು ತಾವು ಹೂಡಿಕೆ ಆಯ್ಕೆಗೆ ಮುಂಚೆ ಅಧ್ಯಯನ, ಅರಿವು ಮೂಡಿಸಿಕೊಂಡು ನಿರ್ಧರಿಸಬೇಕು.

ಪೇಟೆಯು ಚಟುವಟಿಕೆಯಲ್ಲಿ­ರುವಾಗ ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಬರುವ ಸುದ್ದಿಗಳನ್ನು ವಿಶ್ಲೇಷಣೆಗಳನ್ನು ಅಂಧರಾಗಿ ಅನುಸರಿಸದೇ, ಸಂದರ್ಭವ­ನ್ನರಿತು ತುಲನಾತ್ಮಕವಾಗಿ ನಿರ್ಧರಿಸ­ಬೇಕು. ಉದಾಹರಣೆಗೆ ₨3 ಸಾವಿರ ಕೋಟಿ ತೆರಿಗೆ ಕೇಸನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ಸಂದ­ರ್ಭದಲ್ಲಿ, ಈ ತೀರ್ಪು ಮತ್ತಷ್ಟು ಕಂಪೆನಿ­ಗಳಿಗೂ ಅನುಕೂಲಕರವೆಂದು ಪ್ರಕಟಿಸಿ­ದಾಗ ಕೆಲವು ಕಂಪನಿಗಳು ಏರಿಕೆ ಕಂಡವು. ಅಂತಹ ಸಂದರ್ಭವನ್ನು ಲಾಭದ ನಗದೀಕರಣಕ್ಕೆ ಉಪಯೋಗಿಸಿ­ಕೊಳ್ಳುವುದು ಸೂಕ್ತ.

ಶುಕ್ರವಾರದಂದು ಅಬಾನ್‌ ಆಫ್‌ ಷೋರ್‌ ಕಂಪೆನಿಗೆ ಒ.ಎನ್‌.ಜಿ.ಸಿ. ಆರ್ಡರ್ ಬಂದಿದೆ ಎಂದಾಗ ಷೇರಿನ ಬೆಲೆಯು ಸುಮಾರು ನೂರು ರೂಪಾಯಿ­ಗಳಿಗೂ ಹೆಚ್ಚಿನ ಏರಿಕೆ ಪಡೆಯಿತು. ಈ ಆರ್ಡರ್‌ 2015 ರಲ್ಲಿ ಆರಂಭವಾಗುವ ಪ್ರಾಜೆಕ್‌್ಟಗೆ ಈ ಭವಿಷ್ಯದ ಘಟನೆಗೆ ವರ್ತಮಾನದಲ್ಲಿ ಭಟ್ಟಿ ಇಳಿಸಿ ಮೌಲೀಕರಣ ಮಾಡುವ ಈ ವಿಸ್ಮಯಕಾರಿ ಗುಣ ಷೇರುಪೇಟೆಗೆ ಮಾತ್ರ. ಇಂತಹ ಗುಣಗಳಿಗೆ ಸ್ಪಂಧಿಸುವಾಗ ತುಲನಾತ್ಮಕ ನಿರ್ಧಾರ ಅಗತ್ಯ. ಅರಿತು ಹೂಡಿಕೆ ಮಾಡಿ ಅನುಸರಿಸಬೇಡಿರಿ. ಇಂತಹ ಬೆಳವಣಿಗೆ­ಗಳು ಸಾಮಾನ್ಯವಾಗಿದೆ. ಎಚ್ಚರ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.