ADVERTISEMENT

ಇಂದಿನಿಂದ ವೀರಭದ್ರಸ್ವಾಮಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2017, 6:10 IST
Last Updated 9 ಏಪ್ರಿಲ್ 2017, 6:10 IST
ಇಂದಿನಿಂದ ವೀರಭದ್ರಸ್ವಾಮಿ ಜಾತ್ರೆ
ಇಂದಿನಿಂದ ವೀರಭದ್ರಸ್ವಾಮಿ ಜಾತ್ರೆ   

ಹಿರಿಯೂರು: ತಾಲ್ಲೂಕಿನ ‘101 ದೇಗುಲಗಳ ಗ್ರಾಮ’ ಎಂದು ಪ್ರಸಿದ್ಧವಾಗಿರುವ ಹರ್ತಿಕೋಟೆಯ ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವ ಏ.9ರಿಂದ 15ರವರೆಗೆ ನಡೆಯಲಿದೆ ಎಂದು ದೇಗುಲದ ಪ್ರಕಟಣೆ ತಿಳಿಸಿದೆ.9ರಂದು ಗಂಗಾಪೂಜೆ, ರುದ್ರ ಅಭಿಷೇಕ ಮತ್ತು ಕಂಕಣಧಾರಣೆ ನೆರವೇರಲಿದೆ. 10ರಂದು ಧ್ವಜಾರೋಹಣ ಮತ್ತು ಪಲ್ಲಕ್ಕಿ ಉತ್ಸವ, 11ರಂದು ಅಗ್ನಿಕುಂಡ (ಗುಗ್ಗಳ), ಬೆಳ್ಳಿ ಕವಚ ಧಾರಣೆ ಮಾಡಲಾಗುವುದು. 12ರಂದು ಹೂವಿನ ತೇರು, 13ರಂದು ದೊಡ್ಡ ರಥೋತ್ಸವ, 14ರಂದು ವಸಂತೋತ್ಸವ ಹಮ್ಮಿಕೊಳ್ಳಲಾಗಿದೆ.  15ರಂದು ಕಂಕಣ ವಿಸರ್ಜನೆಯೊಂದಿಗೆ ಜಾತ್ರಾ ಮಹೋತ್ಸವ ಸಮಾಪನಗೊಳ್ಳಲಿದೆ.

ಜಾತ್ರೆಗೆ 103 ವರ್ಷಗಳ ಇತಿಹಾಸ: ವೀರಭದ್ರಸ್ವಾಮಿ ಜಾತ್ರಾ ಮಹೋತ್ಸವಕ್ಕೆ 103 ವರ್ಷಗಳ ಇತಿಹಾಸವಿದೆ. ಇಲ್ಲಿಗೆ ಆಂಧ್ರಪ್ರದೇಶದಿಂದ ಕೂಡ ಸಾವಿರಾರು ಭಕ್ತರು ಬರುತ್ತಾರೆ. ಜಾತ್ರೆಯ ಬಳಿಕ ದನಗಳ ಜಾತ್ರೆ ನಡೆಯುತ್ತದೆ.

ಸ್ವಾಮಿಯ ಹಳೆಯ ರಥ ಶಿಥಿಲ ವಾಗಿದ್ದರಿಂದ ನೂತನ ನಿರ್ಮಿಸಲಾಗಿದೆ. ಉತ್ಸವದ ಸಂದರ್ಭದಲ್ಲಿ ಹರ್ತಿಕೋಟೆ, ಚನ್ನಮ್ಮನಹಳ್ಳಿ, ಕಪಿಲೆಹಟ್ಟಿ, ಮಾರೇನ
ಹಳ್ಳಿ, ನಾಗಜ್ಜನಕಟ್ಟೆ, ಮುದಿಯಪ್ಪನ ಕೊಟ್ಟಿಗೆ, ಗುಳಗೊಂಡನಹಳ್ಳಿ, ಮಲ್ಲಪ್ಪನಹಳ್ಳಿಗಳ ಭಕ್ತರು ರಥವನ್ನು ಹೂವಿನಿಂದ ಅಲಂಕರಿಸಿ, ಕೊಬ್ಬರಿ ಆರತಿ ಮಾಡುವುದು ವಿಶೇಷ. ಜಾತ್ರಲ್ಲಿ ನಡೆಯುವ ಅಗ್ನಿಕುಂಡ ಈ ಭಾಗದಲ್ಲಿ ಪ್ರಸಿದ್ಧವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.