ADVERTISEMENT

ಕ್ಷೀಣಿಸಿದ ಜನಪದ ಕಲಾವಿದರು

ಜಿಲ್ಲಾ ಮಟ್ಟದ ಜನ-ಪದ ಕಲಾಮೇಳಲ್ಲಿ ನಯಾಜ್ಅಹಮದ್ ವಿಷಾದ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 8:42 IST
Last Updated 28 ಮಾರ್ಚ್ 2017, 8:42 IST
ಬಾಗೇಪಲ್ಲಿ: ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನಪದ ಹಾಗೂ ಜಾನಪದ ಕಲಾವಿದರ ಸಂಖ್ಯೆ ಕ್ಷೀಣವಾಗುತ್ತಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಎಂ.ನಯಾಜ್ ಅಹಮದ್ ವಿಷಾದ ವ್ಯಕ್ತಪಡಿಸಿದರು. 
 
ಪಟ್ಟಣ ಹೊರವಲಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗೂಳೂರಿನ ಸ್ಫೂರ್ತಿ ಯುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಜನಪದ ಕಲಾಮೇಳದಲ್ಲಿ ಮಾತನಾಡಿದರು.
 
ಹಿಂದೆ ಮನೆಗಳ ಮುಂದೆ ದೇವರಪದ, ಭಜನೆ ಹಾಡಲು ಬರುತ್ತಿದ್ದ ಜಾನಪದ ಕಲಾವಿದರು ಮಾಯವಾಗುತ್ತಿದ್ದಾರೆ. ಮುಂದೊಮ್ಮೆ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಅಧ್ಯಕ್ಷ ಎ.ಜಿ.ಸುಧಾಕರ್ ಮಾತನಾಡಿ, ಗಡಿಪ್ರದೇಶದ ಬಾಗೇಪಲ್ಲಿ ತಾಲ್ಲೂಕಿನಲ್ಲಿ  ಕನ್ನಡ ಪರ ಕಾರ್ಯಕ್ರಮಗಳು ನಡೆಯುತ್ತಿರುವುದು ಸಂತಸ ತಂದಿದೆ. ಕಲೆ ಯಾರ ಸ್ವತ್ತಲ್ಲ ಅಲ್ಲ. ಕಲೆ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಶ್ರಮಿಸಬೇಕು ಎಂದು ತಿಳಿಸಿದರು. 
 
ಪ್ರಾಧ್ಯಾಪಕ ಡಾ.ಟಿ.ಎನ್.ಕೇಶವಮೂರ್ತಿ ಮಾತನಾಡಿ,  ಕಲೆಗಳಿಂದ ಇಡೀ ಸಂಸ್ಕೃತಿ ಅನಾವರಣವಾಗುತ್ತಿದೆ ಎಂದು ತಿಳಿಸಿದರು.
 
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಡಿ.ಎನ್.ಕೃಷ್ಣಾರೆಡ್ಡಿ, ಕನ್ನಡ ಕಲಾ ಸಂಘದ ಅಧ್ಯಕ್ಷ ಪಿ.ಎಸ್.ರಾಜೇಶ್, ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಂ.ಎನ್.ಮಂಜುನಾಥ್, ಪ್ರಾಧ್ಯಾಪಕರಾದ ಡಾ.ಬಿ.ಎನ್.ಪ್ರಭಾಕರ್, ಡಾ.ಟಿ.ಎನ್.ಕೇಶವಮೂರ್ತಿ ಡಾ.ಚಿನಗಾನಪಲ್ಲಿ, ಎಸ್.ವೆಂಕಟ ರಾಮರೆಡ್ಡಿ, ಪ್ರೊ.ಎಲ್.ನಾಗರಾಜ್, ಹರೀಶ್, ಪೋತುಲಪ್ಪ, ವೆಂಕಟೇಶ್,  ಕೆ.ಬಿ.ಕಾಂತರಾಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.