ADVERTISEMENT

ಗೋಶಾಲೆ ಸ್ಥಗಿತ; ಜಾನುವಾರುಗಳಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2017, 7:26 IST
Last Updated 13 ಏಪ್ರಿಲ್ 2017, 7:26 IST

ಸಂತೇಮರಹಳ್ಳಿ: ಸಮೀಪದ ಮಂಗಲ ಗ್ರಾಮದ ಬಳಿಯ ಗೋಶಾಲೆ ಸ್ಥಗಿತಗೊಂಡಿದ್ದು ಈ ಭಾಗದ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ಸಂಕಷ್ಟ ಎದುರಾಗಿದೆ.ಗೋಶಾಲೆಯ ಕೆಲವು ಜಾನುವಾರುಗಳಿಗೆ ಸಾಂಕ್ರಾಮಿಕ ರೋಗ ತಗುಲಿದ ಹಿನ್ನೆಲೆಯಲ್ಲಿ ತಾಲ್ಲೂಕು ಗೋಶಾಲೆಯನ್ನು ಸ್ಥಗಿತಗೊಳಿಸಿತ್ತು.

ಈಗ ಒಟ್ಟಾರೆ ಮೇವು ಕೊರತೆಯಿಂದ ಜಾನುವಾರುಗಳಿಗೆ ಕಷ್ಟವಾಗಿದೆ. ಸೋಂಕು ತಗುಲಿದ್ದ ರಾಸುಗಳಿಗೆ ಪಶುಪಾಲನಾ ಇಲಾಖೆ ಚಿಕಿತ್ಸೆ ನೀಡಿದೆ. ಇತರೆ ಜಾನುವಾರುಗಳಿಗೆ ಮುಂಜಾಗ್ರತೆ ಚಿಕಿತ್ಸೆ ನೀಡಲಾಗಿಲ್ಲ ಎಂದು ಹೇಳಿದರು.

ಸಾಂಕ್ರಾಮಿಕ ರೋಗ ನೆಪದಲ್ಲಿ ಗೋಶಾಲೆ ಸ್ಥಗಿತಗೊಳಿಸಲಾಗಿದೆ. ಸೋಂಕು ರಹಿತ ಜಾನುವಾರುಗಳಿಗೆ ಗೋಶಾಲೆ ಆರಂಭಿಸಬೇಕು ಎಂಬುದು ರೈತರ ಕೋರಿಕೆ.
ಮಂಗಲ, ಯಡಿಯೂರು, ಕರಡಿಮೋಳೆ, ಹುಲ್ಲೇಪುರ, ಮಹಾಂತಾಳಪುರ, ಭೊಗಾಪುರ, ಕಿರಗಸೂರು, ಯಲಕ್ಕೂರು, ಮಂಗಲ ಹೊಸೂರು, ಸಿಂಗನಪುರ ಗ್ರಾಮಗಳಿಂದ 2 ಸಾವಿರ ಜಾನುವಾರುಗಳಿಗೆ ಮೇವು, ನೀರು ದೊರಕುತ್ತಿತ್ತು.

ADVERTISEMENT

ಒಣ ಹುಲ್ಲು, ಹೊಟ್ಟು ಹಾಗೂ ಜೋಳದಕಡ್ಡಿ 2 ತಿಂಗಳಿಗೆ ಆಗುವಷ್ಟು ಮೇವು ಮಾತ್ರ ಲಭ್ಯವಿದೆ. ಮಳೆ ಬಂದರೆ ಮೇವು ಹಾಳಾಗುತ್ತದೆ. ಕೂಡಲೇ ಮೇವುನ್ನು ಜಾನುವಾರುಗಳಿಗೆ ವಿತರಿಸಿ ಎಂಬುದು ರೈತರ ಮನವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.