ADVERTISEMENT

ಮಲೇರಿಯಾಗೆ ಹೊಸ ಲಸಿಕೆ

ಪಿಟಿಐ
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ಮಲೇರಿಯಾಗೆ ಹೊಸ ಲಸಿಕೆ
ಮಲೇರಿಯಾಗೆ ಹೊಸ ಲಸಿಕೆ   

ಲಂಡನ್‌: ಮಲೇರಿಯಾಗೆ ಐದು ಬಗೆಯ ಹೊಸ ಲಸಿಕೆಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದು, ಇದು ಕೆಂಪು ರಕ್ತ ಕಣಗಳನ್ನು ಪ್ರವೇಶಿಸುವ ಪರಾವಲಂಬಿಯ ಸಾಮರ್ಥ್ಯ ತಗ್ಗಿಸಲು ಕಾರಣವಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.

ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್‌ ನಿಯತಕಾಲಿಕೆಯಲ್ಲಿ ಪ್ರಕಟವಾದ ಈ ಸಂಶೋಧನೆಯ ಪ್ರಕಾರ, ಮಲೇರಿಯಾ ನಿಯಂತ್ರಣಕ್ಕೆ ಈ ಲಸಿಕೆ ಅತ್ಯಂತ ಪ್ರಭಾವಶಾಲಿಯಾಗಿ ಪರಿಣಮಿಸಲಿದ್ದು, ಕೆಂಪು ರಕ್ತ ಕಣಗಳನ್ನು ಪ್ರವೇಶಿಸುವ ರೋಗದ ಸಾಮರ್ಥ್ಯವನ್ನು ಕುಂಠಿತಗೊಳಿಸಲಿದೆ.

ಮಲೇರಿಯಾ ಮಾನವನ ಕೆಂಪು ರಕ್ತ ಕಣಗಳನ್ನು ಪ್ರವೇಶಿಸುವ ಸೂಕ್ಷ್ಮವಾದ ಹಂತದಲ್ಲಿ ಇಂಗ್ಲೆಂಡ್‌ನ ವೆಲ್‌ಕಮ್‌ ಟ್ರಸ್ಟ್‌ ಸ್ಯಾಂಗರ್‌ ಸಂಸ್ಥೆಯ ಸಂಶೋಧಕರು ಮತ್ತು ಸಿಬ್ಬಂದಿ ಈ ಅಧ್ಯಯನ ನಡೆಸಿದ್ದಾರೆ.

ADVERTISEMENT

ವಿಶ್ವದ ಜನಸಂಖ್ಯೆಯ ಸುಮಾರು ಅರ್ಧದಷ್ಟು ಜನರು ಮಲೇರಿಯಾ ಭೀತಿ ಎದುರಿಸುತ್ತಿದ್ದಾರೆ. ಪ್ರತಿವರ್ಷ 20 ಕೋಟಿ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. 2015ರಲ್ಲಿ ಸುಮಾರು 5 ಲಕ್ಷ ಜನರು ಈ ರೋಗದಿಂದ ಮೃತಪಟ್ಟಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಸಾವುಗಳು ಸಂಭವಿಸುತ್ತಿದ್ದರೂ, ಪ್ರಸ್ತುತ ಮಲೇರಿಯಾಕ್ಕೆ ಹೆಚ್ಚು ಪರಿಣಾಮಕಾರಿ ಲಸಿಕೆ ಲಭ್ಯವಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.