ADVERTISEMENT

ಮಹಾಗಾಂವ: ಬೀಜ ವಿತರಣೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 7:25 IST
Last Updated 15 ಸೆಪ್ಟೆಂಬರ್ 2017, 7:25 IST
ಕಮಲಾಪುರ ಸಮೀಪದ ಮಹಾಗಂವ ರೈತ ಸಂಪರ್ಕ ಕೇಂದ್ರದಲ್ಲಿ ಬಿಕೆಡಿಬಿ ನಿರ್ದೇಶಕ ವೈಜನಾಥ ತಡಕಲ್‌ ಬುಧವಾರ ರೈತರಿಗೆ ಕಡಲೆ ಹಾಗೂ ಜೋಳದ ಬೀಜ ವಿತರಿಸಿದರು
ಕಮಲಾಪುರ ಸಮೀಪದ ಮಹಾಗಂವ ರೈತ ಸಂಪರ್ಕ ಕೇಂದ್ರದಲ್ಲಿ ಬಿಕೆಡಿಬಿ ನಿರ್ದೇಶಕ ವೈಜನಾಥ ತಡಕಲ್‌ ಬುಧವಾರ ರೈತರಿಗೆ ಕಡಲೆ ಹಾಗೂ ಜೋಳದ ಬೀಜ ವಿತರಿಸಿದರು   

ಕಮಲಾಪುರ: ಸಮೀಪದ ಮಹಾಗಂವ ರೈತ ಸಂಪರ್ಕ ಕೇಂದ್ರದಲ್ಲಿ ಬಿಕೆಡಿಬಿ ನಿರ್ದೇಶಕ ವೈಜನಾಥ ತಡಕಲ್‌ ಬುಧವಾರ ರೈತರಿಗೆ ಕಡಲೆ ಹಾಗೂ ಜೋಳದ ಬೀಜ ವಿತರಿಸಿದರು.

ನಂತರ ಮಾತನಾಡಿದ ಅವರು, ಹಿಂಗಾರು ಬಿತ್ತನೆಗೆ ಇನ್ನೂ ಕಾಲಾವಕಾಶವಿದ್ದು, ಸರ್ಕಾರ ಎಲ್ಲ ರೈತ ಸಂಪರ್ಕ ಕೇಂದ್ರಗಳಿಗೆ ಈಗಾಗಲೇ ಕಡಲೆ ಹಾಗೂ ಜೋಳದ ಬೀಜ ಸರಬರಾಜು ಮಾಡಿದೆ. ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 75, ಇನ್ನುಳಿದ ರೈತರಿಗೆ ಶೇ 50ರಷ್ಟು ರಿಯಾಯಿತಿ ನೀಡಲಾಗಿದೆ.

ಇದು ಸರ್ಕಾರದ ರೈತಪರ ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ. ಎಲ್ಲ ರೈತರು ಬಿತ್ತನೆಗೆ ಬೇಕಾದ ಬೀಜ ಗೊಬ್ಬರ ಶೇಖರಿಸಿಟ್ಟುಕೊಂಡು ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಸಲಹೆ ನೀಡಿದರು.

ADVERTISEMENT

ಕೆಡಿಪಿ ಸದಸ್ಯ ಮಜರ ಅಲಿ ದರ್ಜಿ, ಮುಖಂಡ ಗುರುರಾಜ ಪಾಟೀಲ, ಗ್ರಾ.ಪಂ ಉಪಾಧ್ಯಕ್ಷ ನರೇಶ ಹರಸೂರಕರ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ವಿಜಯಲಕ್ಷ್ಮೀ ಜೈನಾಪೂರೆ, ಸಿಬ್ಬಂದಿ ಮಾರುತಿ, ಗುಂಡಪ್ಪ ಸಿರಡೋಣ, ಅಂಬಾರಾಯ ಹಿಪ್ಪರಗಿ, ವೀರಣ್ಣ ಉಚ್ಚದ, ಸತೀಶ ಸಾಹು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.