ADVERTISEMENT

‘ಅರಣ್ಯ ಸಂಪತ್ತು ರಕ್ಷಣೆ ಎಲ್ಲರ ಹೊಣೆ’

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 11:02 IST
Last Updated 16 ಏಪ್ರಿಲ್ 2017, 11:02 IST

ಬಾಗಲಕೋಟೆ: ನಶಿಸುತ್ತಿರುವ ಅರಣ್ಯ ಸಂಪತ್ತಿನ ರಕ್ಷಣೆ ಹಾಗೂ ಪರಿಸರ ರಕ್ಷಣೆಯ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.ತಾಲ್ಲೂಕಿನ ನೀಲಾನಗರದಲ್ಲಿ ಪ್ರಾದೇಶಿಕ ಅರಣ್ಯ ವಿಭಾಗದ ವತಿ ಯಿಂದ ಶನಿವಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಎಲ್‌ಪಿಜಿ ಸಿಲಿಂಡರ್ ಹಾಗೂ ಬಯೋ ಗ್ಯಾಸ್ ಯೂನಿಟ್ ವಿತರಿಸಿ  ಮಾತನಾಡಿದರು.

ಬಾಗಲಕೋಟೆ ಮತಕ್ಷೇತ್ರದಲ್ಲಿ ಅರಣ್ಯ ಇಲಾಖೆ 120 ಫಲಾನುಭವಿಗಳಿಗೆ ಸಿಲಿಂಡರ್ ವಿತರಿಸಲಾಗುತ್ತಿದೆ. ಇದರಿಂದ ಹೊಗೆ ರಹಿತ ಮನೆ ನಿರ್ಮಿಸುವ ಉದ್ದೇಶ ಹೊಂದಿದೆ ಎಂದರು.ಶಾಸಕರ ಅನುದಾನದಡಿ ಈಗಾಗಲೇ ನೀಲಾನಗರದಲ್ಲಿ ಅನೇಕ ಅಭಿವೃದ್ಧಿಪರ ಕಾಮ ಗಾರಿ ಕೈಗೆತ್ತಿಕೊಂಡಿದೆ. ₹ 13.50 ಕೋಟಿ ವೆಚ್ಚದಲ್ಲಿ ಶಿರೂರಿ ನಿಂದ ನೀಲಾ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸ ಲಾಗಿದೆ ಎಂದರು. ಮಾಜಿ ಶಾಸಕ ಪಿ.ಎಚ್. ಪೂಜಾರ ಮಾತನಾಡಿ, ರಾಜ್ಯ ಸರಕಾರ ಅರಣ್ಯದ ಮೇಲಿನ ಒತ್ತಡ ಮಾಡುವ ಉದ್ದೇಶ ದಿಂದ ಪ್ರತಿಯೊ ಬ್ಬರಿಗೂ ಎಲ್‌ಪಿಜಿ ಸಿಲಿಂಡರ್ ಸಂಪರ್ಕ ಕಲ್ಪಿಸುತ್ತಿದೆ. ಗ್ರಾಮೀಣ ಭಾಗದ ಜನತೆ ಅರಣ್ಯ ರಕ್ಷಣೆಗೆ ಅರಣ್ಯ ಇಲಾಖೆ ಯೊಂದಿಗೆ ಕೈಜೋಡಿಸ ಬೇಕು ಎಂದರು.

ಬಸವಂತಪ್ಪ ಮೇಟಿ . ಡಿಸಿಎಫ್ ಎನ್.ಡಿ. ಸುದರ್ಶನ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕುಮಾರ ಮಹಾ ರಾಜರು ಸಾನ್ನಿಧ್ಯ ವಹಿಸಿದ್ದರು.ಜಿ.ಪಂ. ಸದಸ್ಯ ರಂಗಪ್ಪ ಗೌಡರ, ತಾ.ಪಂ.ಸದಸ್ಯೆ ರುಕ್ಮಾಬಾಯಿ ಕಟ್ಟೀಮನಿ, ಸತೀಶ ನಾಯಕ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಲಿತಾ ದೊಡ ಮನಿ, ನಾಗೇಶ ಪೂಜಾರಿ, ಮುತ್ತು ಹಳದೂರ ಸೇರಿ ಇತರರು ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.