ADVERTISEMENT

ಉಪಾಹಾರದಲ್ಲಿ ವ್ಯತ್ಯಾಸ: ಮಕ್ಕಳು ಅಸ್ವಸ್ಥ

ನಾಗೂರ ಗ್ರಾಮದ ಕಸ್ತೂರ ಬಾ ವಸತಿ ಶಾಲೆಯ 10 ಮಕ್ಕಳು ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 6:32 IST
Last Updated 19 ಜನವರಿ 2017, 6:32 IST

ಹುನಗುಂದ: ಸಮೀಪದ ನಾಗೂರ ಗ್ರಾಮದ ಕಸ್ತೂರಬಾ ವಸತಿ ಶಾಲೆಯ 10 ಹೆಣ್ಣು ಮಕ್ಕಳು ಮತ್ತು ವಾರ್ಡನ್ ವಡಗೇರಿ ಬುಧವಾರ ಮುಂಜಾನೆ ತಿಂದ ಉಪಾಹಾರದಲ್ಲಿ ವ್ಯತ್ಯಾಸವಾಗಿ ವಾಂತಿ ಯಿಂದ ಒಂದಿಷ್ಟು ತೊಂದರೆಯಾದಾಗ ಅವರನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ತಕ್ಷಣದಲ್ಲಿ ಚಿಕಿತ್ಸೆ ಪಡೆದು ಮಕ್ಕಳು ಹಾಗೂ ವಾರ್ಡನ್ ಗುಣಮುಖಗೊಂಡಿದ್ದು ವರದಿಯಾಗಿದೆ.

ಮುಂಜಾನೆ ಎಂದಿನಂತೆ ಉಪಹಾರ ಮಾಡಿದ್ದಾರೆ. ಈ ಕ್ಷಣದಲ್ಲಿ ಒಂದೆರಡು ಮಕ್ಕಳು ವಾಂತಿಯನ್ನು ಮಾಡಿಕೊಂಡಿ ದ್ದಾರೆ. ತದನಂತರ ಉಳಿದ ಮಕ್ಕಳೂ ವಾಂತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮೊದಲು ಅಲ್ಲಿಯೇ ಚಿಕಿತ್ಸೆ ಕೊಡಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಹುನಗುಂದಕ್ಕೆ ಬಂದ ಮೇಲೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಸುಭಾಷ ಸಂಪಗಾಂವಿ ಮತ್ತು ಬಿಇಓ ಅಶೋಕ ಭಜಂತ್ರಿ ಬಂದು ಮಕ್ಕಳ ಯೋಗಕ್ಷೆಮ ಕೇಳಿದ್ದಲ್ಲದೇ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

  ಚಿಕಿತ್ಸೆ ನೀಡುತ್ತಿದ್ದ ಟಿಎಚ್‌ಒ ಡಾ.ಕುಸುಮಾ ಮಾಗಿ ಅವರನ್ನು ಪ್ರಜಾವಾಣಿ ಮಾಧ್ಯಮ ಪ್ರತಿನಿಧಿ ಅಸ್ವಸ್ಥ ಮಕ್ಕಳ ಪರಿಸ್ಥಿತಿ ಬಗ್ಗೆ ಮಾತನಾಡಿಸಿದಾಗ ‘ಸ್ವಲ್ಪ ಆಹಾರದಲ್ಲಿ ವ್ಯತ್ಯಾಸವಾಗಿದೆ. ಸಧ್ಯ ಗುಣಮುಖರಾಗಿದ್ದಾರೆ’ ಎಂದರು. ಈ ಮಧ್ಯ ನಾಗೂರಿನ ಕೆಲ ಮುಖಂಡರು ಊಟ ಉಪಹಾರ ಮತ್ತು ಇತರ ವ್ಯವಸ್ಥೆಗಳ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಇದೇ ಸಮಯದಲ್ಲಿ ಆಗ್ರಹಿಸಿದರು.

ಅಲ್ಲಿ ಸೇರಿದ್ದ ಗ್ರಾಮಸ್ಥರು ಮತ್ತು ಜನತೆಗೆ ಆತಂಕ ಸೃಷ್ಟಿಯಾಗಿತ್ತು. ಒಂದೆ ರಡು ಗಂಟೆಗಳಲ್ಲಿ ಮಕ್ಕಳು ಯಥಾಸ್ಥಿತಿಗೆ ಬಂದಾಗ ಮಕ್ಕಳ ಪಾಲಕರು ಮತ್ತು ವಸತಿ ನಿಲಯದ ಮುಖ್ಯಸ್ಥರು ನಿರಾಳ ವಾದರು. ಶಾಲೆಯ ಶಿಕ್ಷಕರು, ಅಧಿ ಕಾರಿಗಳು ಸ್ಥಳದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.