ADVERTISEMENT

ಕಬಡ್ಡಿ: ಹಿರೆಆಲಗುಂಡಿ ವಿನಾಯಕ ತಂಡ ಪ್ರಥಮ

ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿ: 55 ಕೆ.ಜಿ ವಿಭಾಗ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 7:01 IST
Last Updated 22 ಮಾರ್ಚ್ 2018, 7:01 IST
55 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಹಿರೆಆಲಗುಂಡಿಯ ವಿನಾಯಕ ತಂಡ
55 ಕೆ.ಜಿ ವಿಭಾಗದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಹಿರೆಆಲಗುಂಡಿಯ ವಿನಾಯಕ ತಂಡ   

ಬೀಳಗಿ: ತಾಲ್ಲೂಕಿನ ಮುಂಡುಗನೂರ ಗ್ರಾಮದಲ್ಲಿ ಮಾಳಿಂಗೇಶ್ವರನ ಜಾತ್ರೆಯ ನಿಮಿತ್ತವಾಗಿ ನಡೆದ ಪುರುಷರ 55 ಕೆ.ಜಿ ವಿಭಾಗದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಹಿರೆಆಲಗುಂಡಿ ವಿನಾಯಕ ತಂಡ ಪ್ರಥಮ ಸ್ಥಾನ ಪಡೆಯಿತು.

ಮಾಳಿಂಗೇಶ್ವರ ಗ್ರಾಮೀಣಾಭಿವೃದ್ದಿ ಸಂಘ ಮಾಳಿಂಗೇಶ್ವರನ ದೇವಸ್ಥಾನದ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾ ವಳಿಯಲ್ಲಿ ಹಿರೆಆಲಗುಂಡಿ ವಿನಾಯಕ, ಜಂಬಗಿ ಬಿ.ಕೆ, ಪರಮಾನಂದ ಕವಟಗಿ, ಹಾಗೂ ಕೊಣ್ಣೂರ ತಂಡಗಳು ಸೆಮಿಫೈನಲ್ ಪ್ರವೇಶಿಸಿದವು.

ಸೆಮಿಫೈನಲ್‌ನಲ್ಲಿ ವಿನಾಯಕ ಹಿರೆಆಲಗುಂಡಿ ತಂಡ ಪರಮಾನಂದ ಕವಟಗಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದರೆ, ಮತ್ತೊಂದು ಕಡೆ ಜಂಬಿಗಿ ಬಿ ಕೆ ತಂಡ, ಕೊಣ್ಣೂರಿನ ತಂಡವನ್ನು ಪರಾಭವಗೊಳಿಸಿ ಫೈನಲ್‌ಗೆ ಪ್ರವೇಶಿಸಿತು.

ADVERTISEMENT

ಫೈನಲ್‌ ಪಂದ್ಯಾವಳಿಯಲ್ಲಿ ಹಿರೆಆಲಗುಂಡಿಯ- ವಿನಾಯಕ ಮತ್ತು ಜಂಬಗಿ ಬಿ.ಕೆ ತಂಡಗಳು ರೋಚಕ ಸೆಣಸಾಟ ನಡೆಸಿದವು.

ಹಿರೆಆಲಗುಂಡಿಯ ಮಂಜುನಾಥ ಚಿಮ್ಮನಕಟ್ಟಿ ಉತ್ತಮ ದಾಳಿ ಮತ್ತು ತಂಡದ ಸಮಯೋಜಿತ ಆಟದಿಂದ, ಜಂಬಗಿ ಬಿ ಕೆ ತಂಡವನ್ನು 13 ಅಂಕ ಗಳಿಂದ ಪರಾಭವಗೊಳಿಸಿ ಪ್ರಥಮ ಸ್ಥಾನ ಪಡೆದು ₹ 20 ಸಾವಿರ ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಜಂಬಗಿ ಬಿ.ಕೆ ತಂಡ ₹ 15 ಸಾವಿರ ನಗದು ಮತ್ತು ಟ್ರೋಫಿ ಪಡೆದು ರನ್ನರ್‌ ಆಫ್ ಸ್ಥಾನಕ್ಕೆ ತೃಪ್ತಿಪಟ್ಟಿತು. ಪರಮಾನಂದ ಕವಟಗಿ ತೃತಿಯ ಸ್ಥಾನ ಪಡೆದು ₹ 10
ಸಾವಿರ ಹಾಗೂ ಟ್ರೋಫಿ, ಕೊಣ್ಣೂರ ತಂಡ ನಾಲ್ಕನೇ ಸ್ಥಾನ ಪಡೆದು ₹ 7 ಸಾವಿರ ಮತ್ತು ಟ್ರೋಫಿ ತನ್ನದಾಗಿಸಿಕೊಂಡಿತು.

ಪಂದ್ಯಾವಳಿಯಲ್ಲಿ ಉತ್ತಮ ದಾಳಿಗಾರನಾಗಿ ಮಂಜುನಾಥ ಚಿಮ್ಮನಕಟ್ಟಿ, ಉತ್ತಮ ಹಿಡಿತಗಾರನಾಗಿ ಕರಿಯಪ್ಪ ಕರಿಗಾರ, ಸರ್ವೋತ್ತಮ ಆಟಗಾರನಾಗಿ ಮಹೇಶ ಹುನಸಿಕಟ್ಟಿ ಹೊರಹೊಮ್ಮಿದರು. ಗ್ರಾಮದ ಹಿರಿಯ ಮುಖಂಡರಾದ ಡಾ. ಜಯಗೊಂಡ ಗಡಗಿ, ಬಸವರಾಜ ಬಿರಾದಾರ, ಸದಾಶಿವ ಲೆಂಡಗಿ, ನ್ಯಾಮದೇವ ಬಾಡಗಿ, ಕುಮಾರ ಪಾಟೀಲ, ಮಾಳಪ್ಪ ಕುರಿ, ಕಲ್ಲಪ್ಪ ಪೂಜನ್ನವರ ಪಂದ್ಯಾವಳಿ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.