ADVERTISEMENT

‘ಗೋವು ಭಾರತದ ಬದುಕು’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 6:18 IST
Last Updated 24 ನವೆಂಬರ್ 2017, 6:18 IST

ಮುಧೋಳ: ‘ಗೋವು ಈ ದೇಶದ ಬದುಕು, ಬೆಳಕು, ಗೋವಿಲ್ಲದೆ ಭಾರತೀಯರ ಬದುಕಿಲ್ಲ. ಕೃಷಿ, ಅರ್ಥಿಕತೆ, ಸಾಗಾಣಿಕೆ, ಪರಿಸರ, ಆರೋಗ್ಯ, ಆಹಾರ, ಸಂಸ್ಕೃತಿ, ಅಧ್ಯಾತ್ಮ ಹೀಗೆ ಎಲ್ಲ ಕ್ಷೇತ್ರಗಳನ್ನು ಗೋವಿನ ಕೊಡುಗೆ ಇದೆ’ ಎಂದು ಕಸಬಾಜಂಬಗಿ ಹಿರೇಮಠದ ರುದ್ರಮುನಿ ಶಿವಾಚಾರ್ಯ ಶ್ರೀಗಳು ಹೇಳಿದರು.

ಅವರು ನಗರದ ಗಾಂಧಿ ವೃತ್ತದಲ್ಲಿ ಗೋಹತ್ಯಾ ನಿಷೇಧ ಹಾಗೂ ಗೋರಕ್ಷಾ ತಳಿ ಅಭಿವೃದ್ಧಿಗಾಗಿ ಸಹಿಸಂಗ್ರಹ ‘ಅಭಯಾಕ್ಷರ’ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾರತದ ಜನಜೀವನ ಗೋವಿ ಲ್ಲದೆ ಸಮೃದ್ಧವಾಗಿರದು. ಅಧುನಿಕ ವಿಜ್ಞಾನ ಗೋವು ಹಾಗೂ ಗೋಜನ್ಯ ಪದಾರ್ಥಗಳ ಮಹತ್ವವನ್ನು ಸಂಶೋಧನೆಗಳ ಮೂಲಕ ರೂಜುವಾತು ಮಾಡಿದೆ ಎಂದರು.

ADVERTISEMENT

ರಾಮಚಂದ್ರಪುರಮಠದ ಪ್ರತಿನಿಧಿ ಮಂಜುನಾಥ ಭಟ್ಟ ಚಾಲನೆ ನೀಡಿ ಮಾತನಾಡಿ, ಭಾವನೆ, ಬದುಕಿನ ದೃಷ್ಟಿಯಿಂದ ಹಾಗೂ ಸಂವಿಧಾನ ನಿರ್ದೇಶನದ ಪಾಲನೆ ದೃಷ್ಟಿಯಿಂದಲೂ ಗೋವು ಉಳಿಯಬೇಕಿದೆ. ಗೋವು ಉಳಿದರೆ ಮಾತ್ರ ನಾವು ಉಳಿಯುತ್ತೇವೆ ಎಂದರು. ಮಹಾಲಿಂಗಪುರದ ಮಹಾ ಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು, ರೂಗಿಯ ನಿತ್ಯಾನಂದ ಶ್ರೀಗಳು, ಶಿರೋಳದ ಶಂಕರಾರೂಢ ಶ್ರೀಗಳು, ಬೆಳಗಲಿಯ ಸಿದ್ಧರಾಮಸ್ವಾಮಿ ಹಾಗೂ ಗೋಪಾಲ ಕೃಷ್ಣ ಗೋಶಾಲೆಯ ನರಪತಸಿಂಗ ಮಹಾರಾಜ ಮಾತನಾಡಿದರು.

ರಾಚಪ್ಪ ಕರೆಹೊನ್ನ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಅಧ್ಯಕ್ಷ ಗುರುರಾಜ ಕಟ್ಟಿ, ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಕಲ್ಲಪ್ಪಣ್ಣ ಸಬರದ, ಸಂಗನಗೌಡ ಪಾಟೀಲ, ಬಸವರಾಜ ಹಿರೇಮಠ, ನಿಂಗನಗೌಡ ನಾಡಗೌಡ, ಶ್ರೀನಿವಾಸ ಪಾಟೀಲ, ಸಿದ್ದು ಚಿಕದಾನಿ, ರಾಮನೌಡ ನಾಡಗೌಡ, ಸದಾಶಿವ ಬಾಗೋಡಿ, ಸಂಜೀವ್ ನಿಗಡೆ, ಅಶೋಕ ಕುಳಲಿ, ಬಸವರಾಜ ಮಹಾಲಿಂಗೇಶ್ವರಮಠ, ಗುರುಪಾದ ಕುಳಲಿ, ಜಾಲಿನಸಿಂಗ್ ರಜಪೂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.