ADVERTISEMENT

‘ಗ್ರಾಮ ಗುರುತಿಸಿ ಶೀಘ್ರ ಅಧಿಸೂಚನೆ ಹೊರಡಿಸಿ’

​ಪ್ರಜಾವಾಣಿ ವಾರ್ತೆ
Published 24 ಮೇ 2017, 10:04 IST
Last Updated 24 ಮೇ 2017, 10:04 IST

ಗುಳೇದಗುಡ್ಡ: ಸರ್ಕಾರ ಮಂಡಿಸಿದ 2017–18ರ ಬಜೆಟ್‌ನಲ್ಲಿ ಘೋಷಣೆ ಮಾಡಿದ 49 ಹೊಸ ತಾಲ್ಲೂಕುಗಳ ಪಟ್ಟಿ ಯಲ್ಲಿ ಗುಳೇದಗುಡ್ಡ ಒಂದು. ಘೋಷಣೆ ಮಾಡಿರುವ ನೂತನ ತಾಲ್ಲೂಕಿಗೆ ತಿಂಗಳು ಕಳೆದರೂ ಸಂಬಂಧಿಸಿದ ಗ್ರಾಮಗಳನ್ನು ಗುರುತಿಸಿ ಅಧಿಸೂಚನೆ ಇನ್ನು ಹೊರಡಿಸಿಲ್ಲ. ಹೀಗಾಗಿ ಸಾರ್ವಜನಿಕರಲ್ಲಿ ತೀವ್ರ ಗೊಂದಲ ಉಂಟು ಮಾಡಿದೆ.

ಹಳ್ಳಿಗಳ ಸೇರ್ಪಡೆ ಇಲ್ಲದೇ ಜನರಲ್ಲಿ ಉಂಟಾಗಿರುವ ಗೊಂದಲ ನಿವಾರಣೆಗೆ ಅಧಿಸೂಚನೆ ಹೂರಡಿಸಬೇಕು ಎಂದು ಈಚೆಗೆ ಗುಳೇದಗುಡಕ್ಕೆ ಉಪವಿಭಾಗಾ ಧಿಕಾರಿ ಶಂಕರಗೌಡ ಸೋಮನಾಳ ಅವರು ಭೇಟಿ ನೀಡಿದಾಗ ಸಾರ್ವಜ ನಿಕರು ಆಗ್ರಹಿಸಿದ್ದರು.

ಗುಳೇದಗುಡ್ಡ ತಾಲ್ಲೂಕು ರಚನೆ ಗಾಗಿ ಒಟ್ಟು 3 ಪ್ರಸ್ತಾವಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಈ ಹಿಂದಿನ ಗುಳೇದ ಗುಡ್ಡ ಮತಕ್ಷೇತ್ರದ ಹುನಗುಂದ ತಾಲ್ಲೂ ಕಿನ 37 ಗ್ರಾಮ, ಬಾದಾಮಿ ತಾಲ್ಲೂಕಿನ 42 ಗ್ರಾಮ ಸೇರಿಸಿ ತಾಲ್ಲೂಕು ರಚನೆಗೆ ಮೊದಲನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು.

ADVERTISEMENT

2008ರಲ್ಲಿ ಡಿಲಿಮಿಟೇಶನ್ ಸಮಿತಿ ವರದಿಯ ಪ್ರಕಾರ ಗುಳೇದಗುಡ್ಡ ಮತ ಕ್ಷೇತ್ರ ರದ್ದಾದ ನಂತರ ಗುಳೇದಗುಡ್ಡ ಹೋಬಳಿಯ 35 ಗ್ರಾಮ ಮತ್ತು ಕೆರೂರ ಹೋಬಳಿಯ 38 ಗ್ರಾಮ ಸೇರಿಸಿ ಒಟ್ಟು73 ಗ್ರಾಮಗಳನ್ನೊಳಗೊಂಡ ಗುಳೇದಗುಡ್ಡ ತಾಲ್ಲೂಕು ರಚನೆಗೆ ಪ್ರಸ್ತಾವವನ್ನು 2008 ಜೂನ್ 10 ರಂದು ಎಂ.ಪಿ. ಪ್ರಕಾಶ ನೇತೃತ್ವದ ಹೊಸ ತಾಲ್ಲೂಕು ಪುನರ್ ರಚನಾ ಸಮಿತಿ ಬಾಗಲಕೋಟೆಗೆ ಬಂದಾಗ ತಾಲ್ಲೂಕು ಹೋರಾಟ ಸಮಿತಿ ಎರಡನೇ ಬಾರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವರದಿ ಸಲ್ಲಿಸಿದೆ.

ಮೂರನೇ ಬಾರಿ ಗುಳೇದಗುಡ್ಡ ಹೋಬಳಿ ವ್ಯಾಪ್ತಿಗೆ ಬರುವ 35 ಗ್ರಾಮ, ಗುಳೇದಗುಡ್ಡ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲ, ಕಾಟಾಪುರ, ಗೋನಾಳ, ಸಿರಬಡಗಿ, ಮಂಗಳೂರ, ನಂದಿಕೇಶ್ವರ, ಬಾಚಿನಗುಡ್ಡ, ಬಿ.ಎನ್.ಜಾಲಿಹಾಳ, ಕೆಂದೂರ, ಕುಟಕನಕೇರಿ ಹಾಗೂ ಬೇಡರ ಬೂದಿಹಾಳ ಹೀಗೆ ಒಟ್ಟು 11 ಗ್ರಾಮ ಸೇರಿ ಒಟ್ಟು–46 ಗ್ರಾಮಗಳ ಪಟ್ಟಿ ತಯಾರಿಸಿ ಕೊನೆಯ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.

ಇದೀಗ ಗುಳೇದಗುಡ್ಡ ಪಟ್ಟಣವನ್ನು ತಾಲ್ಲೂಕನ್ನಾಗಿ ಸರ್ಕಾರವೇನೋ ಘೋಷಣೆ ಮಾಡಿದೆ. ಆದರೆ ಈಗಾಗಲೆ ಸಲ್ಲಿಸಿದ ಮೂರು ಪ್ರಸ್ತಾವಗಳಲ್ಲಿ ಸರ್ಕಾರ ಯಾವುದನ್ನು ಮಾನ್ಯ ಮಾಡು ತ್ತದೆ ಎಂಬುವುದು ಸಾರ್ವಜನಿಕರ ಪ್ರಶ್ನೆ.

ಒಂದು ವೇಳೆ 3ನೇ ಪ್ರಸ್ತಾವನೆಗೆ ಸರ್ಕಾರ ಆಯ್ಕೆ ಮಾಡಿ ಅಧಿಸೂಚನೆ ಹೊರಡಿಸಿದರೆ ಆಗ ತಾಲ್ಲೂಕಿಗೆ ಕೇವಲ 46 ಗ್ರಾಮ ಬರುತ್ತವೆ. ಇದರಿಂದ ಅತ್ಯಂತ ಚಿಕ್ಕ ತಾಲ್ಲೂಕು ಆಗುತ್ತದೆ. ಎರಡನೇ ಬಾರಿ ಸಲ್ಲಿಸಿದ ಗುಳೇದಗುಡ್ಡ ಹೋಬಳಿಯ 35 ಮತ್ತು ಕೆರೂರ ಹೋಬಳಿಯ 38 ಗ್ರಾಮ ಹಾಗೂ ಗುಳೇದಗುಡ್ಡ ನೋಂದಣಿ ಕಚೇರಿ ವ್ಯಾಪ್ತಿಗೆ ಬರುವ 11 ಗ್ರಾಮ ಸೇರಿಸಿದರೆ ಒಟ್ಟು–84 ಗ್ರಾಮಗಳನ್ನು ನೂತನ ಗುಳೇದಗುಡ್ಡ ತಾಲ್ಲೂಕಿಗೆ ಗುರುತಿಸಿ ಪಟ್ಟಿ ಸಿದ್ದಪಡಿಸಿದರೆ ನೂತನ ತಾಲ್ಲೂಕಿಗೆ ವಿಶೇಷ ಅರ್ಥ ಬರುತ್ತದೆ  ಎಂದು ಈ ಭಾಗದ ಜನರ ಅಭಿಪ್ರಾಯ.

ಒಟ್ಟಾರೆ ನೂತನ ತಾಲ್ಲೂಕಿನ ಹಳ್ಳಿಗಳ ಸಂಖ್ಯೆ ಕಡಿಮೆ ಆಗದಂತೆ ಅರ್ಥಪೂರ್ಣವಾಗಿ ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಿ ಸಾರ್ವಜನಿಕ ರಲ್ಲಿ ಉಂಟಾಗಿರುವ ಗೊಂದಲ ನಿವಾ ರಿಸಬೇಕು. ಜೊತೆಗೆ ತಾಲ್ಲೂಕು ಕಚೇರಿ ಸ್ಥಾಪನೆ ಮಾಡುವ ಮೂಲಕ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ವೇಗ ಆರಂಭಿ ಸಬೇಕು ಎಂದು ಸಾರ್ವಜನಿಕರ ಪರ ವಾಗಿ ಅಶೋಕ ಹೆಗಡಿ ಆಗ್ರಹಿಸಿದರು. 
 

* * 

ನೂತನ ತಾಲ್ಲೂಕು ವ್ಯಾಪ್ತಿಗೆ ಅಧಿಕೃತವಾಗಿ ಯಾವ ಗ್ರಾಮ ಸೇರ್ಪಡೆಯಾಗುತ್ತವೆ ಎಂಬುವುದನ್ನು ಸರ್ಕಾರ ಸ್ಪಷ್ಟವಾಗಿ ಈವರೆಗೆ ಅಧಿ ಸೂಚನೆ ಹೊರಡಿಸಿಲ್ಲ. ಇದರಿಂದ ಜನರಿಗೆ ಗೊಂದಲವಾಗಿದೆ
ರಾಜಶೇಖರ ಶೀಲವಂತ ಅಧ್ಯಕ್ಷ, ತಾಲ್ಲೂಕು ಹೋರಾಟ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.