ADVERTISEMENT

ಟಿಪ್ಪು ಜಯಂತಿ ಆಚರಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 5:28 IST
Last Updated 8 ನವೆಂಬರ್ 2017, 5:28 IST

ಬಾಗಲಕೋಟೆ: ‘ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ನೆಪದಲ್ಲಿ ರಾಜ್ಯದಾದ್ಯಂತ ಅಶಾಂತಿ ಉಂಟು ಮಾಡಿರುವ ರಾಜ್ಯ ಸರ್ಕಾರ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದೆ’ ಎಂದು ವಿಧಾನಪರಿಷತ್ ಮಾಜಿ ಸದಸ್ಯ ನಾರಾಯಣ ಸಾ ಭಾಂಡಗೆ ಆರೋಪಿಸಿದರು.

ಟಿಪ್ಪು ಜಯಂತಿ ಆಚರಣೆ ವಿರೋಧಿ ಸಮಿತಿ ನೇತೃತ್ವದಲ್ಲಿ ಮಂಗಳವಾರ ಇಲ್ಲಿನ ಜಿಲ್ಲಾಡಳಿತ ಭವನದ ಎದುರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತ
ನಾಡಿದರು. ‘ಈ ಹಿಂದೆ ಕೊಡಗು, ಮೈಸೂರು, ಚಿತ್ರದುರ್ಗ, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಾವಿರಾರು ಹಿಂದೂಗಳ ಕಗ್ಗೊಲೆ ಮಾಡಿ ಹಲವರ ಮತಾಂತರಕ್ಕೆ ಟಿಪ್ಪು ಕಾರಣನಾಗಿದ್ದಾನೆ.

ಆ ಬಗ್ಗೆ ಅನೇಕ ಸಂಶೋಧಕರು, ತಜ್ಞರು ಅನೇಕ ವರ್ಷಗಳಿಂದ ಬೆಳಕು ಚೆಲ್ಲುತ್ತಿದ್ದರೂ ಸರ್ಕಾರ ಅದಕ್ಕೆ ಸೊಪ್ಪು ಹಾಕುತ್ತಿಲ್ಲ. ಹಲವು ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಿರುವ ವ್ಯಕ್ತಿಯ ಜಯಂತಿ ಆಚರಿಸುವ ಮೂಲಕ ಹಿಂದೂ ವಿರೋಧಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ತನ್ನ ಆಳ್ವಿಕೆಯ ಕೊನೆಯವರೆಗೂ ಹಿಂದೂಗಳ ಹತ್ಯಾಕಾಂಡ ನಡೆಸಿದ ವ್ಯಕ್ತಿಯ ಜಯಂತಿ ಮಾಡುವ ಮೂಲಕ ಸರ್ಕಾರವೇ ಟಿಪ್ಪು ಆದರ್ಶಗಳನ್ನು ಪಾಲಿಸಬೇಕು ಎಂದು ಹೇಳುತ್ತಿದೆ. ಇದರ ಲಾಭ ಪಡೆಯುತ್ತಿರುವ ಪಿಎಫ್‌ಐನಂತಹ ಸಂಘಟನೆಗಳು ಭಾರತವನ್ನು ಇಸ್ಲಾಮಿಕ್ ದೇಶವನ್ನಾಗಿ ಪರಿವರ್ತಿಸಲು ಮುಂದಾಗಿವೆ. ಮತಬ್ಯಾಂಕ್‌ಗಾಗಿ ಸರ್ಕಾರ ಅವರನ್ನು ಓಲೈಸಿಕೊಂಡು ಬರುತ್ತಿದೆ’ ಎಂದು ಪ್ರತಿಭಟನಾಕಾರರು ಹೇಳಿದರು.

ಟಿಪ್ಪು ಜಯಂತಿ ವಿರೋಧಿ ಸಮಿತಿ ಅಧ್ಯಕ್ಷ ಯಲ್ಲಪ್ಪ ಭಜಂತ್ರಿ, ಜಯಂತ ಕುರಂದವಾಡ, ಬಸವರಾಜ ಯಂಕಂಚಿ, ವಿಜಯ್ ಕಾಂಬಳೆ, ರಾಜು ನಾಯಕ್, ಅಶೋಕ ಮುತ್ತಿನಮಠ, ಸುರೇಶ ಬಾತುರಕರ, ನಾಗರಾಜ ಬಾರಕೇರ, ಮನೋಜ್ ಗೋರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.