ADVERTISEMENT

ನೋಡೋರ್ಗೊಂದೈ ಭೋಗ...

ಇಂದ್ರಕುಮಾರ್‌ಗೆ ಮೊದಲ ಬಹುಮಾನ

​ಪ್ರಜಾವಾಣಿ ವಾರ್ತೆ
Published 13 ಜನವರಿ 2015, 6:42 IST
Last Updated 13 ಜನವರಿ 2015, 6:42 IST
ಮೂರು ದಿನಗಳ ಕಾಲ ಹಂಪಿಯಲ್ಲಿ ನಡೆದ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ‘ಪ್ರಜಾವಾಣಿ’ಯ ಬಾಗಲಕೋಟೆ ಛಾಯಾಗ್ರಾಹಕ ಇಂದ್ರಕುಮಾರ್‌ ದಸ್ತೇನವರ್‌ ಅವರಿಗೆ ‘ಪ್ರಾಕೃತಿಕ’ ವಿಭಾಗದಲ್ಲಿ ಮೊದಲ ಸ್ಥಾನ ದೊರೆತಿದೆ.

ಹಂಪಿ: ಮೂರು ದಿನಗಳ ಕಾಲ ಹಂಪಿಯಲ್ಲಿ ನಡೆದ ಉತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ‘ಪ್ರಜಾವಾಣಿ’ಯ ಬಾಗಲಕೋಟೆ ಛಾಯಾಗ್ರಾಹಕ ಇಂದ್ರಕುಮಾರ್‌ ದಸ್ತೇನವರ್‌ ಅವರಿಗೆ ‘ಪ್ರಾಕೃತಿಕ’ ವಿಭಾಗದಲ್ಲಿ ಮೊದಲ ಸ್ಥಾನ ದೊರೆತಿದೆ.

‘ಹಂಪಿ ಪರಂಪರೆ’ ವಿಭಾಗದಲ್ಲಿ ಬಳ್ಳಾರಿಯ ಬಿ.ಎಂ. ಸಿದ್ಧಲಿಂಗಸ್ವಾಮಿ ಮೊದಲ ಸ್ಥಾನ ಪಡೆದಿದ್ದು, ‘ವನ್ಯಜೀವಿ’ ವಿಭಾಗದಲ್ಲಿ ಪಂಪಯ್ಯ ಮಳಿಮಠ, ‘ಜೀವಜಲ’  ವಿಭಾಗದಲ್ಲಿ ಶಂಕರ್.ವಿ.ಪತ್ತಾರ್ ಮೊದಲ ಬಹುಮಾನಕ್ಕೆ ಪಾತ್ರರಾಗಿದ್ದಾರೆ.

ಸ್ಪರ್ಧೆಯಲ್ಲಿದ್ದ 25 ಜನ ಛಾಯಾಗ್ರಾಹಕರ ಒಟ್ಟು 41 ಛಾಯಾಚಿತ್ರಗಳ ಪೈಕಿ ನಾಲ್ವರಿಗೆ ತಲಾ ₨ 5 ಸಾವಿರ  ಬಹುಮಾನ ನೀಡಲಾಗಿದೆ.

ಸ್ಫರ್ಧೆಯಲ್ಲಿದ್ದ ಎಲ್ಲ ಛಾಯಾಚಿತ್ರಗಳನ್ನು ಎದುರು ಬಸವಣ್ಣ ಮಂಟಪದ ಬಳಿ  ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.