ADVERTISEMENT

‘ಭ್ರಷ್ಟ ಸರ್ಕಾರ: ತಜ್ಞರ ಹೇಳಿಕೆಯೇ ಸಾಕ್ಷಿ’

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2017, 5:36 IST
Last Updated 19 ಸೆಪ್ಟೆಂಬರ್ 2017, 5:36 IST

ಜಮಖಂಡಿ: ಸರ್ಕಾರದಿಂದ ಯಾವುದೇ ಕೆಲಸ ಮಾಡಿಸಿಕೊಳ್ಳಬೇಕಾದರೆ ಸೂಟ್‌ ಕೇಸ್‌ ಕೊಡಬೇಕಾಗುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ನೀಡಿರುವ ಹೇಳಿಕೆ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಬಿವಿಪಿ ಜಮಖಂಡಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಎಸಿ ಕಚೇರಿ ಮೂಲಕ ರಾಜ್ಯಪಾಲರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ಚಿಂತಕರು, ಸಂಶೋಧಕರು, ಅಧ್ಯಾ ಪಕರನ್ನು ಸೃಷ್ಟಿಸಬೇಕಾದ ವಿಶ್ವವಿದ್ಯಾಲ ಯಗಳಲ್ಲಿ ಮೂಲಸೌಕರ್ಯಗಳ ಕೊರತೆ ಯಿಂದಾಗಿ ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಶಿಕ್ಷಣ ಮತ್ತು ಜ್ಞಾನ ಕೇಂದ್ರಗಳಾಗಬೇಕಾದ ವಿಶ್ವವಿದ್ಯಾಲಯ ಗಳು ಜಾತಿ, ರಾಜಕೀಯ ಮತ್ತು ಭ್ರಷ್ಟಾ ಚಾರದ ಕೇಂದ್ರಗಳಾಗುತ್ತಿವೆ ಎಂದು ದೂರಲಾಗಿದೆ.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಎನ್ನುವುದಕ್ಕೆ ಹಂಪಿ ವಿವಿ ಕುಲಪತಿ ಡಾ.ಮಲ್ಲಿಕಾ ಘಂಟಿ ಅವರ ಹೇಳಿಕೆ ಸಾಕ್ಷ್ಯ ಒದಗಿಸಿದಂತಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.  ಗ್ರೇಡ್‌–2 ತಹಶೀಲ್ದಾರ್‌ ಎಸ್‌.ಎಸ್‌. ನಾಯ್ಕಲಮಠ ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಸಂಚಾಲಕ ವಿಜಯ ಕುಮಾರ ಶಿರೂರ, ಕೆಂಚಪ್ಪ ಬಿರಾದಾರ, ರಾಯಪ್ಪ ಪೂಜಾರಿ, ಪ್ರಸಾದ ಮಾಳಿ, ದೀಪಾ ಪಾಲಬಾವಿ, ಪವಿತ್ರಾ ಸಾದಾಪ್ಪ ಗೋಳ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.