ADVERTISEMENT

‘ಮೊಬೈಲ್‌ ವ್ಯಸನ ಮಕ್ಕಳಿಗೆ ಮಾರಕ’

ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಡಾ.ಆನಂದ ಪಾಂಡುರಂಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 11:04 IST
Last Updated 18 ಫೆಬ್ರುವರಿ 2017, 11:04 IST
ಗುಳೇದಗುಡ್ಡ: ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಲ್ಲಿ ಸೃಜನಾತ್ಮಕ ಚಿಂತನೆ ಬೆಳೆಸುವ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಅಗತ್ಯ ಎಂದು ಧಾರವಾಡದ ಮನೋವೈದ್ಯ ಡಾ.ಆನಂದ ಕೆ. ಪಾಂಡುರಂಗಿ ಹೇಳಿದರು.    
  
ಗುರುಸಿದ್ದೇಶ್ವರ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.  ಮೊಬೈಲ್ ಇದೊಂದು ಮುರ್ಖರ ಪೆಟ್ಟಿಗೆ ಇದ್ದಂತೆ. ಪಾಲಕರು ತಮ್ಮ ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡುವ ಕೆಲಸ ಮಾಡಬೇಕು ಎಂದು ಹೇಳಿದರು.
   
ಗುರುಸಿದ್ದೇಶ್ವರ ಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹುಬ್ಬಳ್ಳಿ ವಿವೇಕಾನಂದರ ಕಾಲೇಜಿನ ಪ್ರಾಧ್ಯಾಪಕ ಪಿ.ಎಸ್. ಹೆಗಡೆ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಜಿ.ಎಸ್. ಜವಳಿ (ರಾಜು) ಅಧ್ಯಕ್ಷತೆ ವಹಿಸಿದ್ದರು. ಡಾ. ಆನಂದ ಕೆ. ಪಾಂಡುರಂಗಿ ದಂಪತಿಯನ್ನು ಗೌರವಿಸಲಾಯಿತು. ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ನೀಡಲಾಯಿತು. 
 
ಅನುಪಮಾ ಪಾಂಡುರಂಗಿ, ಸಿದ್ದಬಸಪ್ಪ ಕೆಲೂಡಿ, ಶಿವಾನಂದ ಎಣ್ಣಿ, ನಿವೃತ್ತ ಉಪನ್ಯಾಸಕ ಎನ್.ಬಿ. ಚಿತ್ರಗಾರ, ಎಸ್.ಐ. ರಾಜನಾಳ ಇತರರು ಉಪಸ್ಥಿತರಿದ್ದರು. ಶಾಲೆಯ ಪ್ರಾಚಾರ್ಯ ಎ.ಜಿ. ತುಪ್ಪದ ಸ್ವಾಗತಿಸಿದರು. ಅಂಜನಾ ಸೋಲಾಪುರ, ದಹಿಂಡ ಕಾಂಚನಾ ನಿರೂಪಿಸಿದರು. ವೆಂಕಟೇಶ ಚವಾಣ ವಂದಿಸಿದರು. ನಂತರ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.